ರಾಜ್ಯಕ್ಕೆ ಹಾಗು ರಾಷ್ಟ್ರಕ್ಕೆ ಅನೇಕ ಸಾಧಕರು ತೀರ್ಥಹಳ್ಳಿ ನಾಡಿನಿಂದ ಹೊರಹೊಮ್ಮಿದ್ದು ಅನೇಕರು ದೇಶದ ಸೇನೆಯಲ್ಲಿ ಸೇವೆ ಸಲ್ಲೀಸುತ್ತಾ ಇದ್ದು ಮತ್ತು ಸಿನಿಮಾ ರಂಗದಲ್ಲಿ ಹಾಗು ಪತ್ರಿಕಾ ರಂಗದಲ್ಲಿ ಮತ್ತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.
ಸಾಮಾನ್ಯವಾಗಿ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ , ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ – ಹುಟ್ಟಿದ್ದು ಉತ್ತರ ಪ್ರದೇಶದ ಗೊರಕ್ ಪುರ್ ಆದರೆ ಇವರು ಮೂಲತಃ ಶೃಂಗೇರಿಯವರು …… ಶ್ರೀ ಬಿ.ಎಮ್. ಸುರೇಂದ್ರ ಮತ್ತು ಶ್ರೀಮತಿ ಗಾಯತ್ರಿ ಅವರ ಸುಪುತ್ರ, !!
ಸುಮಾರು ವರ್ಷಗಳ ಪರಿಚಯ ಅಜಯ್ ಕುಮಾರ್ ಶರ್ಮ ರ ಜೊತೆ… ಆದರೆ ನಮ್ಮ ಪರಿಚಯ ಕೇವಲ ಜಂಗಮ ವಾಣಿಗೆ ಸೀಮಿತ… ಆಗಿತ್ತು ಆದರೆ ಭಾನುವಾರ ದ ಕಥಾ ಬಿಂದು ಪುಸ್ತಕ ಬಿಡುಗಡೆ ವೇದಿಕೆ ನಮ್ಮಿಬರನ್ನು , ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಸಂಸ ಬಯಲು ರಂಗಮಂದಿರ ದಲ್ಲಿ – ಮುಖತ ಭೇಟಿಗೆ ಅವಕಾಶ ಕಲ್ಪಿಸಿ ದ ಪಿ. ವಿ. ಪ್ರದೀಪ್ ಕುಮಾರ್ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ… ಮಾಧ್ಯಹ್ನ ದ ಹೊತ್ತಿನಲ್ಲಿ ಅಜಯ್ ಕುಮಾರ್ ಶರ್ಮ ರ ಜೊತೆ… ಮಾತು ಆರಂಭ ವಾಗಿತ್ತು , ಅವರೊಂದಿಗೆ
ಪತ್ರಿಕೆ
: – ಮಾತನಾಡಿದ್ದು ಅವರನ್ನು ಪರಿಚಿಯಿಸುವ ಪ್ರಯತ್ನ ಈ ಲೇಖನದ ಮೂಲಕ !!
“ ಸಾಧನೆ “ : –
ಅಜಯ್ ಕುಮಾರ್ ಶರ್ಮ ರ ಸಾಧನೆ ಯ ಹಿಂದೆ ಇವರ ಹೆಂಡತಿ – ಡಾ ಶಿಲ್ಪ ಮತ್ತು ಮಗ – ಅಮಿತೇಶ್ ಶರ್ಮಾ ಅವರ ಪಾಲು ದೊಡ್ಡದು ಎನ್ನುತ್ತಾರೆ ಅಜಯ್ ಕುಮಾರ್ ಶರ್ಮಾ ಅವರು.
“ ವಿದ್ಯಾಭ್ಯಾಸ “ : –
ಸಹ್ಯಾದ್ರಿ ಶ್ರೇಣಿಯ ತಪ್ಪಲಿನಲ್ಲಿರುವ ಮಲೆನಾಡಿನವರಾದ ಶ್ರೀ ಅಜಯ್ ಕುಮಾರ್ ಶರ್ಮಾ ಇವರು ಇಂಜಿನಿಯರಿಂಗ್ನಲ್ಲಿ ಪದವಿ (B.E) ಮತ್ತು ಸ್ನಾತಕೋತ್ತರ ಪದವಿಯನ್ನು (M.Sc) ಪಡೆದಿರುತ್ತಾರೆ .
“ ವೃತ್ತಿ “ : –
ಇವರು ವೃತ್ತಿಯಲ್ಲಿ ಚಾರ್ಟೆಡ್ ಇಂಜಿನಿಯರ್ ಹಾಗೂ ಮೌಲ್ಯಮಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಇನ್ಸ್ಟಿಟ್ಯೂಷನ್ ಆಫ್ ವ್ಯಾಲ್ಯೂರ್ಸ್,ದೆಹಲಿ ಮತ್ತು ದಿ ಇನ್ಸ್ಟಿಟ್ಯೂಷನ್ ಆಫ್ ಎಂಜಿನೀಯರ್ಸ್ (ಇಂಡಿಯಾ), ಕೊಲ್ಕತ್ತಾ ಮತ್ತು ಕರ್ನಾಟಕ ಇತಿಹಾಸ ಅಕಾದೆಮಿ (ರಿ), ಬೆಂಗಳೂರು ಇದರ ಸದಸ್ಯರಾಗಿರುತ್ತಾರೆ.
“ ಅಧ್ಯಯನ “ : –
ಅಜಯ್ ಕುಮಾರ್ ಶರ್ಮಾ ಅವರು ಹಲವಾರು ವರ್ಷಗಳಿಂದ ಮಲೆನಾಡು ಮತ್ತು ಕರಾವಳಿಯಲ್ಲಿರುವ ಪುರಾತನ ದೇವಾಲಯಗಳು, ಕೋಟೆಗಳು, ಸ್ಮಾರಕಗಳು, ಮಲೆನಾಡು ಮತ್ತು ಕರಾವಳಿಯ ಸ್ಥಳೀಯ ಕಟ್ಟಡದ ವಾಸ್ತುಶೈಲಿ ಮತ್ತು ಹಿಂದಿನ ನಗರ ಯೋಜನೆಯನ್ನು ಇಂದಿನ ಎಂಜಿನಿಯರಿಂಗ್ ದೃಷ್ಟಿಕೋನದಿಂದ ಅಧ್ಯಯನ ಮಾಡುತ್ತಿದ್ದಾರೆ.
ಈ ಹಿಂದೆ ಕೆಳದಿ ಅರಸರು ಆಳಿದ ಪ್ರದೇಶವೇ ಇವರ ಅಧ್ಯಯನದ ಕ್ಷೇತ್ರ ವ್ಯಾಪ್ತಿಯಾಗಿದೆ. ಇವರು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮುಖಾಂತರ ಮಲೆನಾಡು ಹಾಗೂ ಕರಾವಳಿಗೆ ಸಂಬಂಧಿಸಿದ ಹೊಸ ವಿಷಯಗಳನ್ನು ಪರಿಚಯಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ
ಅಜಯ್ ಕುಮಾರ್ ಶರ್ಮಾ ಅವರು ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಇತಿಹಾಸ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಪ್ರಬಂಧವನ್ನು ಮಂಡಿಸಿರುತ್ತಾರೆ, ಇವರು ಬರೆದ ಸಾಕಷ್ಟು ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟಣೆ ಗೊಂಡಿರುತ್ತದೆ.
“ ಅಜಯ್ ಶರ್ಮ ಅವರ ಮೂರು ಕೃತಿ ಲೋಕಾರ್ಪಣೆ “
ಕಥಾಬಿಂದು ಪ್ರಕಾಶನ ಮಂಗಳೂರು ಟಿವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಸಂಸ ಬಯಲು ರಂಗಮಂದಿರ ದಲ್ಲಿ40 ಕೃತಿಗಳು ಲೋಕಾರ್ಪಣೆ ಗೊಂಡಿತ್ತು , ಅದರಲ್ಲಿ ವಿಶೇಷ ಅಂದರೆ ಮಲೆನಾಡಿನ ಲೇಖಕ ಅಜಯ್ ಶರ್ಮ ಅವರ ಮೂರು ಕೃತಿ ಲೋಕಾರ್ಪಣೆ ಗೊಂಡಿತ್ತು , ಅವುಗಳು ಕೆಳದಿ ಸಾಮ್ರಾಜ್ಯ ಮತ್ತು ಎಪ್ಪತ್ತರ ದಶಕದ ಶೃಂಗೇರಿ ಹಾಗೂ ಕೆಳದಿ ಅರಸರಬಿದನೂರು ರಾಕೆಟ್ ……
ಮನದಾಳದ ಮಾತುಗಳು……
ಕಥಾಬಿಂದು ಪ್ರಕಾಶನ ಮಂಗಳೂರು, ಮಂಗಳೂರಿನ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿದೆ.ಕಥಾಬಿಂದು ಪ್ರಕಾಶನವು 2007 ರಲ್ಲಿ ಶ್ರೀ ಪಿ.ವಿ. ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ಪ್ರಾರಂಭವಾಯಿತು.
ಮಲೆನಾಡಿನ ಪರಿಸರ, ಮಲೆನಾಡಿನ ಅಸ್ಮಿತೆ, ಪರಂಪರೆ, ಸಂಸ್ಕೃತಿಗಳು, ಮಲೆನಾಡಿನ ರಾಜ ಮನೆತನದ ಬಗ್ಗೆ ಸಂಶೋಧನೆಯೇ ನನ್ನ ಕಾರ್ಯ ಕ್ಷೇತ್ರ. , ಚೊಚ್ಚಲ ಕೃತಿಗಳು, ಸರಿ ಸುಮಾರು ೧೦೦ ಗಿಂತ ಹೆಚ್ಚು ಸಂಶೋಧನಾ ಲೇಖನಗಳು ಪ್ರಕಟವಾಗಿವೆ.
ಕಥಾಬಿಂದು ಪ್ರಕಾಶನದ ಶ್ರೀ ಪಿ.ವಿ. ಪ್ರದೀಪ್ ಕುಮಾರ್ ಅವರು ಹಲವಾರು ವರ್ಷಗಳಿಂದ ಹೊಸ ಹೊಸ ಲೇಖಕರು, ಕವಿ ಮತ್ತು ಕವಯತ್ರಿ ಗಳನ್ನು ನಾಡಿಗೆ ಪರಿಚಯಿಸುತ್ತಿದ್ದಾರೆ.
ಕನ್ನಡ ಭಾಷೆಯ ಸೇವೆಯೇ ಇವರ ಉಸಿರಾಗಿದೆ….
ಈ ಸಂಧರ್ಭದಲ್ಲಿ ಕಥಾಬಿಂದು ಪ್ರಕಾಶನದ ಶ್ರೀ ಪಿ.ವಿ. ಪ್ರದೀಪ್ ಕುಮಾರ್ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪತ್ರಿಕೆ ಜೊತೆಗೆ ಮಾತನಾಡುತ್ತಾ ನುಡಿದರು.
ಸಂದರ್ಶನ :: ತೀರ್ಥಹಳ್ಳಿ ಅನಂತ ಕಲ್ಲಾಪುರ