ಬೆಳಗಾವಿ :
ಬಸವನಗಲ್ಲಿಯ ಅಪಾರ್ಟ್ ಮೆಂಟ್ ನಲ್ಲಿ ಜ.28 ರಂದು ಸಂಭವಿಸಿದ ಗ್ಯಾಸ್ ಸೋರಿಕೆ
ದುರ್ಘಟನೆಯಲ್ಲಿ ರವಿವಾರ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಗೊಂಡಿದೆ.
ರವಿವಾರ ಜಿಲ್ಲಾಸ್ಪತ್ರೆಯಲ್ಲಿ ಲಲಿತಾ ಮೋಹನ ಭಟ್ (ವಯಸ್ಸು 49) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
84 ವರ್ಷದ ಗೋಪಾಲಕೃಷ್ಣ ಭಟ್ ಚಿಕಿತ್ಸೆ ಫಲಿಸದೆ ಬುಧವಾರ (ಜ.31)ರಂದು ಮೃತಪಟ್ಟಿದ್ದರು.
78 ವರ್ಷದ ಕಮಲಾಕ್ಷಿ ಭಟ್ ಮತ್ತು 28 ವರ್ಷದ ಹೇಮಂತ್ ಭಟ್ ಜ. 29 ರಂದು ಮೃತಪಟ್ಟಿದ್ದರು.
ಉಡುಪಿ ಬಳಿಯ ಆದಿಉಡುಪಿ ಮೂಲದ ಈ ಕುಟುಂಬ ಬೆಳಗಾವಿಯ ಅಪಾರ್ಟ್ಮೆಂಟ್ನಲ್ಲಿ ನೆಲೆಸಿತ್ತು. ಭಾನುವಾರ ಸಂಜೆ (ಜ.28)ರಂದು ಗ್ಯಾಸ್ ಸೋರಿಕೆಗೊಂಡ ಪರಿಣಾಮ ಅನಾಹುತ ಸಂಭವಿಸಿತ್ತು.