ಹೊಸ ಚುನಾವಣಾ ಆಯುಕ್ತರ ಆಯೆಗಿಂದು ಮೋದಿ ನೇತೃತ್ವದ ಸಮಿತಿ ಸಭೆ

ನವದೆಹಲಿ:

ನೂತನ ಚುನಾವಣಾ ಆಯುಕ್ತರನೇ ನೇಮಕ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಬುಧವಾರ ಸಭೆ ಸೇರಲಿದೆ. ಪ್ರಸ್ತುತ ಚುನಾವಣಾ ಆಯುಕ್ತರಾಗಿರುವ ಅನೂಪ್ ಕುಮಾರ್ ಪಾಂಡೆ ಫೆ.14ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಸಚಿವರ ನೇತೃತ್ವದ ಆಯ್ಕೆ ಸಮಿತಿಯು ಐವರನ್ನು ಶಿಫಾರಸು ಮಾಡಿದೆ. ಇದರಲ್ಲಿ ಒಬ್ಬರನ್ನು ಪ್ರಧಾನಿ ಮೋದಿ, ಲೋಕಸಭೆಯ ಪ್ರತಿಪಕ್ಷ ನಾಯಕ ಅಧೀರ್, ಕೇಂದ್ರ ಸಚಿವರನ್ನು ಒಳಗೊಂಡ ನೇಮಕಾತಿ ಸಮಿತಿ ಅಂತಿಮ ಮಾಡಲಿದೆ. ಮುಂಚೆ ರಾಷ್ಟ್ರಪತಿಗಳು ಹೊಸ ಚುನಾವಣಾ ಆಯುಕ್ತರನ್ನು ನೇಮಿಸುತ್ತಿದ್ದರು.