ಗೋಳಿಯಂಗಡಿ : ಹೆಂಗವಳ್ಳಿ ಗ್ರಾಮದ ತೊಂಬತ್ತು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪಂಚಮ ವರ್ಧಂತ್ಯುತ್ಸವದ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವರಿಗೆ ಪಂಚವಿಶಂತಿ ದ್ರವ್ಯ ಕಲಶ ಪ್ರಧಾನ ಹೋಮ, ರುದ್ರಾಭಿಷೇಕ, ಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರಿಗೆ ನವಕ ಪ್ರಧಾನ ಕಲಶಹೋಮ, ದುರ್ಗಾ ಹೋಮ, ಶ್ರೀ ನಾಗದೇವರಿಗೆ ಹಾಗೂ ಬ್ರಹ್ಮಸ್ಥಾನದ ಪರಿವಾರ ದೇವರಿಗೆ ನವಕ ಪ್ರಧಾನ ಹೋಮ ಕಲಶಾಭಿಷೇಕ, ಶ್ರೀ ವೀರಭದ್ರ ದೇವರ ಸನ್ನಿಧಿಯಲ್ಲಿ
ಸಂದರ್ಶನ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸದ್ಬಕ್ತರಿಂದ ಭಜನೆ, ಸಂಜೆ ಹರಿದಾಸ ಗಣಪತಿ ಹೆಗಡೆ ಗೋಪಿ, ಹಡಿನಬಾಳು ಇವರಿಂದ ಹರಿಕಥಾ ಕಾಲಕ್ಷೇಪ ರಾವಣ ವಧೆ ಶ್ರೀ ರಾಮ ಪಟ್ಟಾಭಿಷೇಕ ಇತ್ತೀಚೆಗೆ ನಡೆಯಿತು.
ತಂತ್ರಿ ಸದಾಶಿವ ಭಟ್ ಬೇಳಂಜೆ ನೇತ್ರತ್ವದಲ್ಲಿ ತೊಂಬತ್ತು ಅಡಿಗರ ಕುಟುಂಬಸ್ಥರ ಸಹಯೋಗದಲ್ಲಿ ರಾಮಕೃಷ್ಣ ಭಾಗವತ ಹಾಗೂ ಅರ್ಚಕರ ವೃಂದವರ ಸಹಕಾರದೊಂದಿಗೆ ವಿವಿಧ ಧಾರ್ಮಿಕ ವಿಧಿ ವಿಧಾನ
ಕಾರ್ಯಕ್ರಮಗಳು ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ನವೀನ್ಚಂದ್ರ ಹೆಗ್ಡೆ, ಆಡಳಿತ ಮಂಡಳಿ ಪದಾಧಿಕಾರಿಗಳು, ಅರ್ಚಕ ವಾಸುದೇವ ಅಡಿಗ, ಶ್ರೀನಿವಾಸ ಅಡಿಗ, ಶಂಕರನಾರಾಯಣ ಅಡಿಗ, ವಿಘ್ನೇಶ್ ಅಡಿಗ, ಹೆಂಗವಳ್ಳಿ ಗ್ರಾಮ ಪಂಚಾಯಿತಿ
ಉಪಾಧ್ಯಕ್ಷ ಯೋಗೀಶ್ ಮಡಿವಾಳ, ಮಾಜಿ ಅಧ್ಯಕ್ಷ ಟಿ.ರಘುರಾಮ ಶೆಟ್ಟಿ
ಹಾಗೂ ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.