ಬೆಂಗಳೂರು:
ಈಗಾಗಲೇ ರಾಜ್ಯದ 48 ಸಾವಿರ ಸರ್ಕಾರಿ ಶಾಲೆಗಳ ಪೈಕಿ 14 ಸಾವಿರ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಲಾಗಿದೆ. ಉಳಿದ ಎಲ್ಲಾ ಶಾಲೆಗಳಲ್ಲೂ ಮಾ.31ರೊಳಗೆ ಸಂಘಗಳನ್ನು ಸ್ಥಾಪಿಸಲು ಕ್ರಮ ವಹಿಸಲಾ ಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

‘ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮ. ಪ್ರತಿ ಶಾಲೆಯಲ್ಲೂ ಹಳೆ ವಿದ್ಯಾರ್ಥಿಗಳ ಸಂಘ, ವಾಟ್ಸ್ ಅಪ್ ಗ್ರೂಪ್‌ಗಳನ್ನು ರಚಿಸಿ ಅವರ ಸಹಕಾರದೊಂದಿಗೆ ಹಾಗೂ ಸಾಂಸ್ಕೃತಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅನುದಾನವನ್ನು ಸೆಳೆದು ಸರ್ಕಾರಿ ಶಾಲೆ ಗಳನ್ನು ಶೈಕ್ಷಣಿಕವಾಗಿ ಹಾಗೂ ಭೌತಿಕವಾಗಿ ಬಲವರ್ಧನೆ ಗೊಳಿಸುವುದು ಉದ್ದೇಶವಾಗಿದೆ ಎಂದು ವಿವರಿಸಿದರು