ಬೆಂಗಳೂರು: ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಆಯ್ಕೆಗೆ ತುರುಸಿನ ತಯಾರಿ ನಡೆಸಿದೆ. ರಾಜ್ಯದ ಒಂಬತ್ತು ಕ್ಷೇತ್ರಗಳಿಗೆ ಬಹುತೇಕ ಇವರೇ ಅಭ್ಯರ್ಥಿಗಳಾಗುವುದು ಬಹುತೇಕ ಖಚಿತ ಎನಿಸಿದೆ.
ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್
ಬೆಂಗಳೂರು ಕೇಂದ್ರ – ಎನ್.ಎ. ಹ್ಯಾರಿಸ್
ತುಮಕೂರು – ಮುದ್ದಹನುಮೇಗೌಡ
ಚಿತ್ರದುರ್ಗ – ಚಂದ್ರಪ್ಪ
ಕೋಲಾರ – ಕೆ.ಎಚ್. ಮುನಿಯಪ್ಪ
ಮಂಡ್ಯ – ಸ್ಟಾರ್ ಚಂದ್ರು (ವೆಂಕಟರಮಣೇಗೌಡ)
ಮೈಸೂರು – ಎಂ. ಲಕ್ಷ್ಮಣ್
ಬೀದರ್ – ರಾಜಶೇಖರ್ ಪಾಟೀಲ್
ಕಲಬುರಗಿ – ರಾಧಾಕೃಷ್ಣ
ಇನ್ನೂ 19 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಾಕಿ ಇದ್ದು, ಇವುಗಳನ್ನು ಸೋಮವಾರ ನಡೆಯಲಿರುವ ಸಭೆಯಲ್ಲಿ ಅಂತಿಮ ಮಾಡಲಾಗುವುದು ಎಂದು ತಿಳಿದುಬಂದಿದೆ. ಆದರೆ, ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶುಕ್ರವಾರವೂ ನಾಯಕರು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಇಂದೇ ಐದಾರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ದೆಹಲಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಉಳಿಕೆ 19 ಕ್ಷೇತ್ರದಲ್ಲಿ ಯಾರು ?
ಬೆಂಗಳೂರು ಉತ್ತರ – ಪ್ರೊ. ರಾಜೀವ್ ಗೌಡ – ನಾರಾಯಣ ಸ್ವಾಮಿ, ಮೀನಾಕ್ಷಿ ಕೃಷ್ಣಬೈರೇಗೌಡ
ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ, ರಮೇಶ್ ಕುಮಾರ್
ಚಿಕ್ಕಬಳ್ಳಾಪುರ – ರಕ್ಷಾರಾಮಯ್ಯ, ವೀರಪ್ಪ ಮೊಯ್ಲಿ, ಶಿವಶಂಕರ ರೆಡ್ಡಿ
ಚಾಮರಾಜನಗರ – ಎಚ್.ಸಿ. ಮಹದೇವಪ್ಪ, ಸುನಿಲ್ ಬೋಸ್, ದರ್ಶನ್ ಧ್ರುವನಾರಾಯಣ
ಹಾಸನ – ಶ್ರೇಯಸ್ ಪಟೇಲ್, ಬಾಗೂರು ಮಂಜುನಾಥ್
ಉಡುಪಿ- ಚಿಕ್ಕಮಗಳೂರು – ಜಯಪ್ರಕಾಶ ಹೆಗ್ಡೆ
ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್, ಆರ್.ವಿ. ದೇಶಪಾಂಡೆ
ಬೆಳಗಾವಿ – ಸತೀಶ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ, ಮೃಣಾಲ್ ಹೆಬ್ಬಾಳ್ಕರ್
ಹುಬ್ಬಳ್ಳಿ- ಧಾರವಾಡ – ರಜತ ಉಳ್ಳಾಗಡ್ಡಿಮಠ, ವಿನಯ್ ಕುಲಕರ್ಣಿ, ಶಿವಲೀಲಾ ಕುಲಕರ್ಣಿ
ಹಾವೇರಿ – ಸಲೀಂ ಅಹಮದ್, ಡಿ.ಆರ್. ಪಾಟೀಲ್
ಕೊಪ್ಪಳ – ಅಮರೇಗೌಡ ಬೈಯಾಪುರ, ರಾಜಶೇಖರ್ ಹಿಟ್ನಾಳ
ರಾಯಚೂರು- ಕುಮಾರ ನಾಯಕ, ರವಿ ಪಾಟೀಲ್ ನಾಯಕ
ಬಳ್ಳಾರಿ – ನಾಗೇಂದ್ರ, ವಿ.ಎಸ್. ಉಗ್ರಪ್ಪ, ವೆಂಕಟೇಶ್ ಪ್ರಸಾದ್
ಬಾಗಲಕೋಟೆ – ವೀಣಾ ಕಾಶಪ್ಪನವರ್, ಆನಂದ್ ನ್ಯಾಮಗೌಡ, ಅಜಯ್ ಕುಮಾರ್ ಸರನಾಯಕ್
ವಿಜಯಪುರ – ರಾಜು ಅಲಗೂರು, ಕಾಂತ ನಾಯಕ್
ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್, ಮಧು ಬಂಗಾರಪ್ಪ
ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ, ಬಿ.ಜಿ. ವಿನಯ್ ಕುಮಾರ್
ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ/ ಲಕ್ಷ್ಮಣ್ ರಾವ್ ಚಿಂಗಳೆ
ದಕ್ಷಿಣ ಕನ್ನಡ- ವಿನಯಕುಮಾರ್ ಸೊರಕೆ, ರಮಾನಾಥ್ ರೈ, ಪದ್ಮರಾಜ್