ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಾಲೋನಿಯಲ್ಲಿ 150 ಕ್ಕೂ ಹೆಚ್ಚು ಶೆಡ್ ಗಳಿವೆ. ಇಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ.
ಕಾರವಾರದ ಮುದಗಾ ನೌಕಾನೆಲೆಯ ಕಾರ್ಮಿಕ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಾರ್ಮಿಕ ಕಾಲೋನಿಯಲ್ಲಿದ್ದ ಮನೆಗಳು ಸುಟ್ಟು ಕರಕಲಾಗಿದೆ.
ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ನೌಕಾನೆಲೆಯಲ್ಲಿದ್ದ ಎನ್ ಸಿಸಿ ಗುತ್ತಿಗೆದಾರರ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ. ಅಡುಗೆ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು, ನಾಲ್ಕೈದು ಮನೆಗಳಿಗೆ ವ್ಯಾಪಿಸಿದೆ. ಘಟನೆಯ ನಂತರ ಕಾರ್ಮಿಕರು ಶೆಡ್ ಬಿಟ್ಟು ಹೊರಗೆ ಓಡಿ ಬಂದಿದ್ದಾರೆ.