ದೆಹಲಿ :
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಕ್ತಾಯಗೊಂಡಿದ್ದು, ವಿವಿಧ ಸಂಸ್ಥೆಗಳು ಚುನಾವಣಾ ಸಮೀಕ್ಷೆಯನ್ನು ಬಿಡುಗಡೆಗೊಳಿಸಿವೆ.

 

ತೆಲಂಗಾಣ :
ಭಾರಿ ಜಿದ್ದಾಜಿದ್ದಿಯಿಂದ ನಡೆದ ತೆಲಂಗಾಣ ವಿದಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು, ಹಲವು ಸಮೀಕ್ಷೆಗಳಲ್ಲಿ ಆಡಳಿತಾರೂಢ ಬಿಆರ್‌ಎಸ್ ಪಕ್ಷ ಮತ್ತು ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಹೋರಾಟವನ್ನು ಅಂದಾಜಿಸಿವೆ.

ಚುನಾವಣೆಗೂ ಮುನ್ನ ನಡೆದಿದ್ದ ಕೆಲ ಸಮೀಕ್ಷೆಗಳು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತದ ಅಂದಾಜು ಮಾಡಿದ್ದವು. ಮತಗಟ್ಟೆ ಸಮೀಕ್ಷೆಯಲ್ಲೂ ಚಾಣಾಕ್ಯ, ಟಿವಿ9, ಜನ್ ಕೀ ಬಾತ್ ಸಮೀ ಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.

ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿದ್ದು, ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 60 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.

ಟಿವಿ 9 ಸಮೀಕ್ಷೆ
*ಬಿಆರ್‌ಎಸ್: 48-58
* ಕಾಂಗ್ರೆಸ್ : 49-59
* ಬಿಜೆಪಿ: 5-10

* ಇತರರು: 6-8

ಜನ್ ಕೀ ಬಾತ್
* ಬಿಆರ್‌ಎಸ್: 40–55

* ಕಾಂಗ್ರೆಸ್: 48–64

* ಬಿಜೆಪಿ: 07–13

* ಎಐಎಂಐಎಂ: 04–07

* ಇತರೆ: 00

ಚಾಣಾಕ್ಷ ಸಮೀಕ್ಷೆ
* ಬಿಆರ್‌ಎಸ್: 22–31

* ಕಾಂಗ್ರೆಸ್: 67–78

* ಬಿಜೆಪಿ: 06–09

* ಎಐಎಂಐಎಂ: 00–00

* ಇತರರು: 06–07

ಪೋಲ್‌ ಸ್ಟ್ರಾಟ್ ಸಮೀಕ್ಷೆ
* ಬಿಆರ್‌ಎಸ್: 48–58

* ಕಾಂಗ್ರೆಸ್: 49–59

* ಬಿಜೆಪಿ: 05–10

* ಎಐಎಂಐಎಂ: 06–08

* ಇತರೆ: 00

ಸಿಎನ್‌ಎನ್ ಸಮೀಕ್ಷೆ
* ಕಾಂಗ್ರೆಸ್: 56

* ಬಿಆರ್‌ಎಸ್: 48

* ಬಿಜೆಪಿ -10

* ಎಂಐಎಂ- 05

ಟೈಮ್ಸ್‌ ನೌ ಸಮೀಕ್ಷೆ
* ಬಿಆರ್‌ಎಸ್: 66

*ಕಾಂಗ್ರೆಸ್ : 37

* ಬಿಜೆಪಿ: 7

ಇತರರು: 9

 

ಛತ್ತೀಸ್ ಗಢ :
ಛತ್ತೀಸ್ಗಡದಲ್ಲಿ ಈ ಸಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ.
ವಿವಿಧ ಸಂಸ್ಥೆಗಳು ಬಿಡುಗಡೆ ಮಾಡಿರುವ ಚುನಾವಣಾ ಸಮೀಕ್ಷೆಗಳು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯನ್ನು ಬಲಗೊಳಿಸಿವೆ.

ಟಿವಿ9 ಸಮೀಕ್ಷೆ:

ಬಿಜೆಪಿ: 35–45

ಕಾಂಗ್ರೆಸ್‌: 40–45

ಇತರರು: 03

* ಇಂಡಿಯಾ ಟಿವಿ– ಸಿಎನ್‌ಎಕ್ಸ್‌ ಸಮೀಕ್ಷೆ:

ಬಿಜೆಪಿ: 30–40

ಕಾಂಗ್ರೆಸ್: 46–56

ಇತರರು: 3–5

* ನ್ಯೂಸ್‌ 18 ಜನ್‌ ಕೀ ಬಾತ್‌ ಚುನಾವಣೋತ್ತರ ಸಮೀಕ್ಷೆ:

ಬಿಜೆಪಿ: 30

ಕಾಂಗ್ರೆಸ್‌: 47

ಇತರರು: 03

* ಟಿವಿ 5 ಸಮೀಕ್ಷೆ ಪ್ರಕಾರ:

ಬಿಜೆಪಿ: 29–39

ಕಾಂಗ್ರೆಸ್‌: 54–64

ರಾಜಸ್ಥಾನ :
ರಾಜಸ್ಥಾನ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದೆ. ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ವಿವರವನ್ನೂ ಬಹಿರಂಗಗೊಳಿಸಿವೆ.

ಬಹುತೇಕ ಸಂಸ್ಥೆಗಳು ಬಿಜೆಪಿ ಪಕ್ಷ ನಿರ್ದಿಷ್ಟ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ. ಇದರಿಂದಾಗಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿದೆ.

2018ರ ಫಲಿತಾಂಶ:
2018ರಲ್ಲಿ ಕಾಂಗ್ರೆಸ್ 99 ಹಾಗೂ ಬಿಜೆಪಿ 73 ಸ್ಥಾನಗಳಲ್ಲಿ ಜಯಸಿತ್ತು. ಬಿಎಸ್‌ಪಿ ಹಾಗೂ ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಸಿಎಂ ಅಶೋಕ್ ಗೆಹಲೋತ್ ಕಾಂಗ್ರೆಸ್ ಸರ್ಕಾರವನ್ನು ರಚಿಸಿದ್ದರು.

 

ವಿವಿಧ ಸಮೀಕ್ಷೆಗಳ ಪ್ರಕಾರ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ?

ಟಿವಿ9 ಭಾರತವರ್ಷ್, ಪೋಲ್‌ಸ್ಟ್ರಾಟ್ ಸಮೀಕ್ಷೆ

ಬಿಜೆಪಿ: 100-110

ಕಾಂಗ್ರೆಸ್: 90-100

ಜನ್ ಕೀ ಬಾತ್ ಸಮೀಕ್ಷೆ:

ಬಿಜೆಪಿ: 100-122

ಕಾಂಗ್ರೆಸ್: 90-110

ನ್ಯೂಸ್ 18 ಸಮೀಕ್ಷೆ:

ಬಿಜೆಪಿ: 111

ಕಾಂಗ್ರೆಸ್: 74

ಇತರೆ: 14

ಟೈಮ್ಸ್ ನೌ ಹಾಗೂ ಇಟಿಜಿ ಸಮೀಕ್ಷೆ:

ಬಿಜೆಪಿ: 108-128

ಕಾಂಗ್ರೆಸ್: 56-72

ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:

ಬಿಜೆಪಿ: 80-110

ಕಾಂಗ್ರೆಸ್: 86-106

ಇತರೆ: 9-18

ಮಧ್ಯಪ್ರದೇಶ :
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಆದರೂ ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.

ಮಧ್ಯ ಪ್ರದೇಶ :
ಒಟ್ಟು ಸ್ಥಾನ: 230, ಮ್ಯಾಜಿಕ್ ನಂಬರ್: 116

ಸಿಎನ್ಎನ್ ಎಕ್ಸಿಟ್ ಪೋಲ್ಸ್
ಬಿಜೆಪಿ-112
ಕಾಂಗ್ರೆಸ್-113
ಬಿಎಸ್ಪಿ-0

ರಿಪಬ್ಲಿಕ್ ಟಿವಿ
ಬಿಜೆಪಿ; 118-130
ಕಾಂಗ್ರೆಸ್; 97-107

ಟಿವಿ9 ಭರತವರ್ಷ
ಬಿಜೆಪಿ; 106-116
ಕಾಂಗ್ರೆಸ್;111-121

 

ಮಿಜೋರಾಂ :
ಮಿಜೋರಾಂನಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ಕಾರ ಆಡಳಿತಕ್ಕೆ ಬರುತ್ತದ ಕಾದು ನೋಡಬೇಕಿದೆ.

ಈಶಾನ್ಯ ಭಾರತದ ರಾಜ್ಯಗಳ ಪೈಕಿ ಮಿಜೋರಾಂ ವಿಧಾನಸಭೆಗೆ ಚುನಾವಣೆ ನಡೆದಿದ್ದು, ಅಲ್ಲಿನ ಜನ ಬದಲಾವಣೆ ಬಯಸಿದಂತಿದೆ. NDTV ಸಮೀಕ್ಷೆ ಪ್ರಕಾರ, ಆಡಳಿತಾರೂಢ ಪಕ್ಷ MNF ಕೇವಲ 10-14 ಸ್ಥಾನಗಳನ್ನಷ್ಟೇ ಪಡೆಯಲಿದ್ದು, ವಿಪಕ್ಷ ZPM 15-25 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಅಲ್ಲದೆ ಕಾಂಗ್ರೆಸ್‌ 5-9 & ಬಿಜೆಪಿ 0-2 ಸ್ಥಾನಗಳಲ್ಲಿ ಗೆಲ್ಲಲಿದೆ. ಈ ಹಿನ್ನೆಲೆಯಲ್ಲಿ ಸದ್ಯದ ಆಡಳಿತ ಪಕ್ಷ ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

 

ಮಿಜೋರಾಂ
ಒಟ್ಟು ಕ್ಷೇತ್ರ: 40, ಮ್ಯಾಜಿಕ್ ನಂಬರ್: 21

ಜನ್‌ ಕಿ ಬಾತ್:
ಎಂಎನ್‌ಪಿ-14
ಜೆಪಿಎಂ-15-25
ಕಾಂಗ್ರೆಸ್-5-9
ಬಿಜೆಪಿ-02