ಬೆಳಗಾವಿ :
ಇಲಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ಪ್ರೀತಿ ಗೌತಮ ಪದಪ್ಪಗೋಳ ಅವರ ಎ ಸೋಸಿಯಾಲಾಜಿಕಲ್ ಸ್ಟಡಿ ಆಫ್ ಹೋಮ್ ಮೆಕರ್ಸ್ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ನೀಡಿದೆ.
ಪ್ರೀತಿ ಗೌತಮ ಪದಪ್ಪಗೋಳ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸುಮಂತ್ ಎಸ್. ಹಿರೇಮಠ ಮಾರ್ಗದರ್ಶನ ಮಾಡಿದ್ದರು.
ಪ್ರೀತಿ ಗೌತಮ ಪದಪ್ಪಗೋಳ ಇವರ ತಂದೆ ಗೌತಮ ರಾಮಕೃಷ್ಣ ಪದಪ್ಪಗೋಳ, ತಾಯಿ ದಿವಂಗತ ಸುರೇಖಾ ಗೌತಮ ಪದಪ್ಪಗೋಳ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದವರಾಗಿದ್ದಾರೆ. ಇವರ ಈ ಸಾಧನೆಗೆ ಕುಟುಂಬ ವರ್ಗದವರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.