ತಿರುಪತಿ: ಅಯೋಧ್ಯೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು, ಸರತಿ ಸಾಲು, ನೀರಿನ ಘಟಕ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಬಗ್ಗೆ ರಾಮಮಂದಿರ ಟ್ರಸ್ಟ್ಗೆ ತಿರುಮಲ ತಿರುಪತಿ ದೇಗಲದ (ಟಿಟಿಡಿ) ಎಂಜಿನಿಯರ್ಗಳ ತಂಡ ಸಲಹೆಗಳನ್ನು ನೀಡಿದೆ. ರಾಮಮಂದಿರ ಟ್ರಸ್ಟ್ ಆಹ್ವಾನದ ಮೇಲೆ ಕಳೆದ ಫೆ.16 ಮತ್ತು 17ರಂದು ಟಿಟಿಡಿ ಎಂಜಿನಿಯರ್ಗಳ ತಂಡವೊಂದು ಅಯೋಧ್ಯೆಗೆ ಭೇಟಿ ನೀಡಿತ್ತು. ದೇಗುಲದಲ್ಲಿ ಜನ ಸಂದಣಿ, ಸರತಿ ಸಾಲು, ನೀರಿನ ಘಟಕ, ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳ ಬಗ್ಗೆ ವರದಿಯನ್ನು ಸಲ್ಲಿಸಿದ್ದು, ಈ ಕುರಿತು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಗೋಪಾಲಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.