ಬೆಳಗಾವಿ :
ಬೆಳಗಾವಿ ತಾಲೂಕಿನಲ್ಲಿ ಶನಿವಾರ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಜಪ್ತುಪಡಿಸಿಕೊಂಡ ಇವುಗಳಲ್ಲಿ ವಾಹನದ ಮೌಲ್ಯ ರೂ: 5,00,000/- ಹಾಗೂ ಮುದ್ದೇಮಾಲು ಹಾಗೂ ಆರೋಪಿತರ ಎರಡು ಮೊಬೈಲುಗಳು ಸೇರಿ ಒಟ್ಟು ಮೌಲ್ಯ ರೂ. 3,50,000/- ಹೀಗೆ ಒಟ್ಟು 9,50,000/- ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ :
ದಿನಾಂಕ:02-12-2023 ರಂದು ಬೆಳಗ್ಗೆ 9-00 ಗಂಟೆಯ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದಿಂದ ಕವಳೆವಾಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪ ವಿಭಾಗ ಅವರ ಸಿಬ್ಬಂದಿ, ಅಬಕಾರಿ ನಿರೀಕ್ಷಕರು, ಬೆಳಗಾವಿ ವಲಯ ನಂ-2 ಹಾಗೂ ಅವರ ಸಿಬ್ಬಂದಿ ಜನರು ಸೇರಿಕೊಂಡು ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದಿಂದ ಕವಳೆವಾಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ರಸ್ತೆಗಾವಲು ಹಾಗೂ ವಾಹನ ತಪಾಸಣೆ ಮಾಡುತ್ತಿರುವಾಗ ಒಂದು ಬಿಳಿ ಬಣ್ಣದ ಅಶೋಕ ಲೆಲ್ಯಾಂಡ್ ಕಂಪನಿಯ ನಾಲ್ಕು ಚಕ್ರ ಗೂಡ್ಸ್ ವಾಹನ ಸಂಖ್ಯೆ ಕೆಎ-22 ಸಿ- 9398 ವಾಹನವನ್ನು ತಪಾಸಣೆ ಮಾಡಿದಾಗ ವಾಹನದ ಹಿಂದುಗಡೆ ಪಾರ್ಟಿಷನ್ ಮಾಡಿ ಬಚ್ಚಿಟ್ಟು 09 ವಿವಿಧ ನಮೂನೆಯ ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಎಂದು ನಮೂದಿರುವ 760 ಬಾಟಲಿಗಳಲ್ಲಿ ಒಟ್ಟು 239.400.ಲೀ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿರುತ್ತದೆ.
ಆರೋಪಿತರಾದ ನಾಗೇಶ ನಾರಾಯಣ ಪಾಟೀಲ ವಯಸ್ಸು: 34 ವರ್ಷ ಉದ್ಯೋಗ: ಡ್ರೈವರ್ ಸಾ: ಮ.ನಂ:387 ಶಿವಾಜಿ ಗಲ್ಲ, ಬಹದ್ದೂರವಾಡಿ ತಾ/ಜಿ:ಬೆಳಗಾವಿ, ಸಾಹಿಲ್ ಲಕ್ಷ್ಮಣ ಪಾಟೀಲ ವಯಸ್ಸು: 19 ವರ್ಷ. ಬ್ರಹ್ಮಲಿಂಗಗಲ್ಲಿ, ಬಹದ್ದೂರವಾಡಿ ತಾ/ಜಿ:ಬೆಳಗಾವಿ ಇವರನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ.
ಬಿಳಿ ಬಣ್ಣದ ಅಶೋಕ ಲೆಲ್ಯಾಂಡ್ ಕಂಪನಿಯ ನಾಲ್ಕು ಚಕ್ರ ಗೂಡ್ಸ್ ವಾಹನ ಸಂಖ್ಯೆ ಕೆಎ-22 ಸಿ-9398 ವಾಹನದ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. ಪ್ರಕರಣದ ಮುಂದಿನ ಕ್ರಮಕ್ಕಾಗಿ ವಾಹನ ಹಾಗೂ ಮುದ್ದೆಮಾಲನ್ನು ಪಂಚನಾಮೆ ಪ್ರಕಾರ ಜಪ್ತು ಮಾಡಿಕೊಂಡು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು.
ದಾಳಿಯನ್ನು ಡಾ:ವೈ ಮಂಜುನಾಥ ಅಬಕಾರಿ ಅವರ ಆಯುಕ್ತರು ಕೇಂದ್ರ ಸ್ಥಾನ ಬೆಳಗಾವಿ, ಫಿರೋಜಖಾನ ಕಿಲ್ಲೇದಾರ ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ, ವನಜಾಕ್ಷಿ ಎಂ. ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ಬೆಳಗಾವಿ, ವಿಜಯಕುಮಾರ ಹಿರೇಮಠ, ಅಬಕಾರಿ ಅಧೀಕ್ಷಕರು, ಅಬಕಾರಿ ಉಪ ಆಯುಕ್ತರ ಕಚೇರಿ, ಬೆಳಗಾವಿ (ದಕ್ಷಿಣ) ಜಿಲ್ಲೆ ಇವರ ಮಾರ್ಗದರ್ಶನದಲ್ಲಿ ರವಿ ಮುರಗೋಡ ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ, ಬೆಳಗಾವಿ ಇವರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ದಾಳಿಯಲ್ಲಿ ಮಂಜುನಾಥ ಗಲಗಲಿ, ಅಬಕಾರಿ ನಿರೀಕ್ಷಕರು, ಉಪ ವಿಭಾಗ, ಬೆಳಗಾವಿ, ಸುನೀಲ ಪಾಟೀಲ, ಅಬಕಾರಿ ಪೇದೆ. ಮಹಾದೇವಪ್ಪ ಕಟಗೆನ್ನವರ, ಅಬಕಾರಿ ಪೇದೆ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.