ಶಿರಸಿ:
ಕಾಡು ಬೆಕ್ಕು ಹಿಡಿಯಲು ವಿದ್ಯುತ್‌ ಕಂಬ ಏರಿದ ಚಿರತೆಯೊಂದು ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಶಿರಸಿ ಸಮೀಪದ ಬೆಳಗಲ ಮನೆ ಬಳಿ ಶುಕ್ರವಾರ ಸಂಜೆ ನಡೆದಿದೆ.

ಚಿರತೆ ಬೇಟೆಗೆಂದು ಅಟ್ಟಿಸಿಕೊಂಡು ಬಂದಾಗ ಜೀವ ಉಳಿಸಿಕೊಳ್ಳಲು ಕಾಡು ಬೆಕ್ಕು ವಿದ್ಯುತ್‌ ಕಂಬ ಏರಿ ಕುಳಿತಿತ್ತು. ತನ್ನ ಬೇಟೆ ಹಿಡಿಯುವ ಆವೇಶದಲ್ಲಿ ಚಿರತೆ ಸಹ ವಿದ್ಯುತ್‌ ಕಂಬ ಏರಿದೆ. ಈ ವೇಳೆ ವಿದ್ಯುತ್ ತಂತಿ ತಗುಲಿ ಚಿರತೆ ಹಾಗೂ ಕಾಡುಬೆಕ್ಕು ಎರಡೂ ಮೃತಪಟ್ಟಿದೆ.
ಘಟನಾ ಸ್ಥಳಕ್ಕೆ ಡಿಎಫ್ಓ. ಅಜ್ಜಯ್ಯ ಹಾಗೂ ಆರ್‌ಎಫ್‌ಓ ಶಿವಾನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಮೂರು ವರ್ಷ ಪ್ರಾಯದ ಚಿರತೆ ಇದಾಗಿರಬಹುದು ಎಂದು ಹೇಳಲಾಗಿದೆ.