ಅಮರಾವತಿ: ಆಂಧ್ರಪ್ರದೇಶದಲ್ಲಿ ಆಡಳಿತಾರೂಢವೈಎಸ್ಆರ್ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಸುಗಮ ಆಡಳಿತ ದೃಷ್ಟಿಯಿಂದ 3 ರಾಜಧಾನಿಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಪ್ರಕಟಿಸಿದೆ. ಪ್ರಸ್ತುತ ರಾಜಧಾನಿ ಅಮರಾವತಿಯನ್ನು ಶಾಸಕಾಂಗಕ್ಕೂ, ವಿಶಾಖ ಪಟ್ಟಣವನ್ನು ಕಾರ್ಯಾಂಗಕ್ಕೂ, ಕರ್ನೂಲ್ ನಗರವನ್ನು ನ್ಯಾಯಾಂಗಕ್ಕೆ ರಾಜಧಾನಿಯನ್ನಾಗಿ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಪ್ರಸ್ತುತ 3 ಸಾವಿರ ರು. ಇರುವ ಕಲ್ಯಾಣ ಯೋಜನೆ ಪಿಂಚಣಿಯನ್ನು 2028ರ ಜನವರಿಯಿಂದ 3,250ಕ್ಕೂ, 2029ರ ಜನವರಿಯಿಂದ 3,500ಕ್ಕೆ ಹೆಚ್ಚಿಸು ವುದಾಗಿ ಘೋಷಿಸಿದೆ. ಜೊತೆಗೆ ಮಕ್ಕಳನ್ನು ಶಾಲೆಗೆ ಕಳಿಸುವ ಮಹಿಳೆಯರಿಗೆ ನೀಡುವ ‘ಅಮ್ಮಾ ವೋಡಿ’ ಪ್ರೋತ್ಸಾಹ ಧನವನ್ನು 2 ಸಾವಿರ ರು. ಹೆಚ್ಚಿಸಿ ವಾರ್ಷಿಕ 17ಸಾವಿರ ರು. ನೀಡಲಾಗುವುದು ಎಂದಿದೆ.