ಬೆಳಗಾವಿ : ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಇಂದು 16 ಮೇ, 2024 ಕ್ಕೆ 40 ವರ್ಷಗಳನ್ನು ಪೂರ್ಣಗೊಳಿಸಿದ ಡಾ.ಪ್ರಭಾಕರ ಕೋರೆಯವರಿಗೆ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಕಾರ್ಯದರ್ಶಿಡಾ.ಬಿ.ಜಿ.ದೇಸಾಯಿಯವರು ಸಮಸ್ತ ಸಿಬ್ಬಂದಿಯೊವರೊಂದಿಗೆ ಹೂಗೂಚ್ಛ ನೀಡಿ ಅಭಿನಂದಿಸಿದರು.

16 ಮೇ, 1984 ರಂದು ಕಾರ್ಯಾಧ್ಯಕ್ಷರಾಗಿ ಕೆಎಲ್‌ಇ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಡಾ.ಕೋರೆಯವರು ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ್ದು ಪವಾಡ ಸದೃಶ. 38ರಷ್ಟಿದ್ದ ಅಂಗಸಂಸ್ಥೆಗಳ ಸಂಖ್ಯೆಯನ್ನು ಇಂದು 310ಕ್ಕೆ ಕೊಂಡ್ಯೊಯ್ದ ಕೀರ್ತಿ ಡಾ.ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಅವರ ಈ ಅವಿಸ್ಮರಣೀಯ ಸೇವೆಯ ಸಂಭ್ರಮಾಚರಣೆಯನ್ನು ಕೆಎಲ್‌ಇ ಆಡಳಿತ ಮಂಡಳಿ ಹಾಗೂ ಸಮಸ್ತ ಕೆಎಲ್‌ಇ ಪರಿವಾರ ಶನಿವಾರ 18 ಮೇ, 2024 ರಂದು ಸಂಜೆ 5.30 ಕ್ಕೆ ಜೆ.ಎನ್‌. ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.