ಬೆಳಗಾವಿ : ಮದುವೆಗೆ ವಿಳಂಬ ಆಗಿದ್ದ ಮನನೊಂದ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಕ್ಕೇರಿ ಪಟ್ಟಣದಲ್ಲಿ ಘಟನೆ ನಡೆದಿದೆ. ಶಾಂತಿನಾಥ ಸುರೇಶ ಕೇಸ್ತಿ (27) ಆತ್ಮಹತ್ಯೆ ಮಾಡಿಕೊಂಡವನು.

ಹುಕ್ಕೇರಿ ಪಟ್ಟಣದಲ್ಲಿ ಸ್ವಂತ ಬೈಕ್ ಗ್ಯಾರೇಜ್ ನಡೆಸುತ್ತಿದ್ದ ಶಾಂತಿನಾಥ ಸುರೇಶ ಕೇಸ್ತಿ, ಸಾಲದ ಸುಳಿಗೆ ಸಿಲುಕಿದ್ದ. ಜತೆಗೆ ಮದುವೆಗೆ ಹೆಣ್ಣು ಸಿಗದ ಕಾರಣಕ್ಕೆ ಸುರೇಶ್‌ ಮನನೊಂದಿದ್ದ. ಇದೇ ಬೇಸರದಲ್ಲಿ ಗುರುವಾರ ಬೆಳಗ್ಗೆ ಗ್ಯಾರೇಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗ್ಯಾರೇಜ್‌ ತೆರೆಯದೆ ಇದ್ದಾಗ ಅನುಮಾನಗೊಂಡು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹುಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ