ಎರಡು ಎಕರೆ ದ್ರಾಕ್ಷಿ ಬೆಳೆಯನ್ನು ಕೊಡಲಿಯಿಂದ ಕಡಿದು ನಾಶ ಪಡಿಸಿದ ರೈತ

ಎರಡು ಎಕರೆ ದ್ರಾಕ್ಷಿ ಬೆಳೆಯನ್ನು ಕೊಡಲಿಯಿಂದ ಕಡಿದು ನಾಶ ಪಡಿಸಿದ ರೈತ
Udayaprabha Latest Breaking News Download App
Udayaprabha Latest Breaking News Download App
Udayaprabha Latest Breaking News Download App

ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳು ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಈ ಘಟನೆ ಜರುಗಿತು

ಕೊಕಟನೂರ: ತಾಲೂಕಿನಲ್ಲಿ ಕಳೆದ ಹತ್ತು ದಿನಗಳ ಹಿಂದೆ ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿತ್ತು. ಅದರ ಜೊತೆಗೆ ಅಕಾಲಿಕ ನಿರಂತರ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರರಿಗೆ ಬಾರಿ ಪ್ರಮಾಣದ ಹಾನಿ ಸಂಭವಿಸಿದ್ದು. ತಾಲೂಕಿನ ಕೆಲವು ದ್ರಾಕ್ಷಿ ಬೆಳೆಗಾರರು ತೋಟವನ್ನು ನಾಶ ಪಡಿಸಿದ್ದಾರೆ. 

ಗ್ರಾಮ ರೈತ ಸೂರ್ಯಾಬಿ ಮೀರಾಸಾಬ ನದಾಫ 2 ಎಕರೆ ಜಾವಿದ ನದಾಫ ಒಂದು ಎಕರೆ ಅವರು ತಾವು ಬೆಳೆದ ಎರಡು ಮತ್ತು ಒಂದು ಎಕರೆ ದ್ರಾಕ್ಷಿ ಬೆಳೆಯನ್ನು ಕೊಡಲಿಯಿಂದ ಕಡಿದು ಹಾಕಿರುವ ಘಟನೆ ನಡೆದಿದೆ.

ಅಕಾಲಿಕ ಮಳೆಯಿಂದ ಹಲವಾರ ರೋಗ ಬಾಧೆಯನ್ನು ನಿಯಂತ್ರಿಸಲು ರೈತರು ಪ್ರತಿನಿತ್ಯ ದುಬಾರಿ ಬೆಲೆಯ ಔಷಧಿ ಸಿಂಪಡಣೆ ಮಾಡಿದರೂ ನಿಯಂತ್ರಣ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವೂ ರೈತರಲ್ಲಿ ಇಲ್ಲವಾಗಿದರಿಂದ. ರೈತ ಎರಡು ಮೂರು ವರ್ಷಗಳ ಕಾಲ ಪೋಷಿಸಿದ ಬೆಳೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸದ್ಯ ಅಕಾಲಿಕ ಮಳೆ ಹಾಗೂ ರೋಗ ಬಾಧೆಯಿಂದ ರೈತರು ದ್ರಾಕ್ಷಿ ಬೆಳೆಯನ್ನು ನಾಶ ಪಡಿಸುತಿದ್ದಾರೆ. 

ಈ ಬಾಗದ ರೈತರಿಗೆ ಅದರಲ್ಲೂ ದ್ರಾಕ್ಷಿ ಬೆಳೆಗಾರರಿಗೆ ಪ್ರತಿ ವರ್ಷ ಪ್ರಾಕೃತಿಕ ಹೊಡೆತಗಳು ಬೀಳುತ್ತಲೇ ಇವೆ. ಹೀಗಾಗಿ ಕೂಡಲೇ ಬೆಳಗಾವಿ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ದ್ರಾಕ್ಷಿ ಬೆಳೆಹಾನಿಯ ಕುರಿತು ಸಮೀಕ್ಷೆ ನಡೆಸುವಂತೆ ಈ ಭಾಗದ ರೈತರು ಆಗ್ರಹಿಸಿದ್ದಾರೆ. 

ಬೆಳೆಗಾರರಿಗೆ ಬಾರಿ ಪ್ರಮಾಣದ ಹಾನಿ ಸಂಭವಿಸಿದ್ದು ವರದಿಯನ್ನು ಮೇಲಾಧಿಕಾರಿಗಳಿಗೆ ಕಳಿಸಿ ಪರಿಹಾರ ಕೊಡಿಸುವ ವಿಶ್ವಾಸವನ್ನು ಗ್ರಾಮ ಲೆಕ್ಕಾಧಿಕಾರಿ ಕಲ್ಮೇಶ ಕಲಮಡಿ ಅವರು ವ್ಯಕ್ತಪಡಿಸಿದರು.  

ರೈತ ದ್ರಾಕ್ಷಿಗಿಡ ಕಡಿಯುವ ಸಂದರ್ಭದಲ್ಲಿ ತೋಟಗಾರಿಕೆ ಅಧಿಕಾರಿ ಅಕ್ಷಯ ಉಪಾಧ್ಯೆ, ಗ್ರಾಮ ಲೆಕ್ಕಾಧಿಕಾರಿ ಕಲ್ಮೇಶ ಕಲಮಡಿ, ರೈತರಾದ ಅರುಣ ಮುದಕಣ್ಣವರ, ಮಾನಸಿಂಗ ಮಗರ, ಧರೆಪ್ಪ ತೇರದಾಳ, ಮುತ್ತಪ್ಪ ಹಗರಿ ಮತ್ತಿತರು ಇದ್ದರು.

ವರದಿ- ಉಮರ ಮೊಮೀನ್