ಅಥಣಿಯ ಸೈನಿಕ ರಸ್ತೆ ಅಪಘಾತದಲ್ಲಿ ಸಾವು

ಅಥಣಿಯ ಸೈನಿಕ ರಸ್ತೆ ಅಪಘಾತದಲ್ಲಿ ಸಾವು
Udayaprabha Latest Breaking News Download App
Udayaprabha Latest Breaking News Download App
Udayaprabha Latest Breaking News Download App

ಅಥಣಿ- ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಥಣಿ ತಾಲೂಕಿನ ಬಲ್ಲಿಗೇರಿ ಗ್ರಾಮದ ಯೋಧ ನಿನ್ನೆ ರಾತ್ರಿ ಮುಧೋಳ್ ತಾಲೂಕಿನ ಲೋಕಾಪುರ್ ಕ್ರಾಸ್ ಬಳಿ ಫೋರ್ ವ್ಹಿಲ್ ರಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದೇಶದ ಸೈನಿಕ ಸ್ಥಳದಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.

ಮೂಲತ: ಅಥಣಿ ಅಥಣಿ ತಾಲೂಕಿನ ಬಲ್ಲಿಗೇರಿ ಗ್ರಾಮದವರಾದ ಶಂಕರ ಮಹಾಲಿಂಗಪ್ಪ ಪಾಟೀಲ (37) ಹತ್ತು ವರ್ಷದಿಂದ ಭೂಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 12 ದಿನದ ಹಿಂದೆ ಅಷ್ಟೇ ರಜೆಗೆ ಊರಿಗೆ ಬಂದಿದ್ದರು. ನಿನ್ನೆ ಸಂಜೆ ತಮ್ಮ ಪತ್ನಿಯ ಹುಟ್ಟುರಾದ ಮುಧೋಳಗೆ ಹೊರಡುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಕಾಲಿಕ ಮರಣ ಹೊಂದಿದ್ದ ಯೋಧನ ಸುದ್ದಿ ತಿಳಿದು ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಅಂಕ್ರಂದನ ಮುಗಿಲು ಮುಟ್ಟಿದೆ. ಮೃತ ವ್ಯಕ್ತಿಯ ಪಾರ್ತಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದ್ದು ಅಂತಿಮ ಸಂಸ್ಕಾರದ ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ.

ವರದಿ : ಅಬ್ಬಾಸ ಮುಲ್ಲಾ