ಶಿವಯೋಗಿ ನಾಡಿನಲ್ಲಿ ಕಲಾಸಕ್ತರ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ ನಾಟಕ ಕಲಾವಿದರು

ಶಿವಯೋಗಿ ನಾಡಿನಲ್ಲಿ ಕಲಾಸಕ್ತರ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ ನಾಟಕ ಕಲಾವಿದರು
Udayaprabha Latest Breaking News Download App
Udayaprabha Latest Breaking News Download App
Udayaprabha Latest Breaking News Download App

ಅಥಣಿ- ಅಥಣಿ ಪಟ್ಟಣದಲ್ಲಿ ಗುರು ಖಾಸ್ಗತೇಶ್ವರ ನಾಟಕ ಕಂಪನಿ ಕಳೆದ ಮೂರು ತಿಂಗಳಿಂದ ವಿವಿಧ ನಾಟಕಗಳ ಪ್ರಯೋಗ ನಡೆಸುತ್ತಿದ್ದು ವೃತ್ತಿ ರಂಗಭೂಮಿಯನ್ನೆ ನಂಬಿ ತಮ್ಮ ನಟನೆಯಿಂದ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಕಲಾವಿದರ ಕುಟುಂಬಗಳು ತಮ್ಮ ಬದುಕಿನ ನಿರ್ವಹಣೆಗಾಗಿ ಪರದಾಡುತ್ತಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದಷ್ಟೇ ಅಥಣಿ ಜನರ ಆಶಿರ್ವಾದ ಮತ್ತು ಕಲಾಭಿಮಾನಿಗಳ ಪ್ರೀತಿಯಿಂದ ಭರ್ಜರಿ ಕಲೆಕ್ಷನ್ ಜೊತೆಗೆ ಐವತ್ತು ಮತ್ತು ನೂರನೆಯ ಯಶಸ್ವಿ ಪ್ರಯೋಗ ಕಾಣುತ್ತಿದ್ದ ನಾಟಕ ಮಂದಿರಗಳು ಸದ್ಯ ನೋಡುಗರ ಕೊರತೆಯಿಂದ ಮತ್ತು ಪ್ರೋತ್ಸಾಹದ ಕೊರತೆಯಿಂದ ನಷ್ಟದಲ್ಲಿ ಸಾಗುತ್ತಿವೆ.ನಾಟಕ ಪ್ರಯೋಗಕ್ಕೆ ಟೆಂಟ್ ಹಾಕಿದ ಜಾಗದ ಬಾಡಿಗೆ,ವಿದ್ಯುತ್ ಬಿಲ್,ಜೊತೆಗೆ ಕಲಾವಿದರ ಊಟ ವಸತಿ ಸೇರಿದಂತೆ ಹಲವು ಖರ್ಚುವೆಚ್ಚಗಳನ್ನು ತೂಗಿಸಲಾಗದೆ ಕೈಗಡ ಸಾಲಕ್ಕೆ ಕೈ ಒಡ್ಡುವಂತಾಗಿದೆ. 

ಕಲಾವಿದರನ್ನು ಉಳಿಸಿ ಕಲೆಯನ್ನು ಬೆಳೆಸಬೇಕಿದ್ದ ಜನರು ನಾಟಕ ನೋಡಲು ಹಿಂದೇಟು ಹಾಕುತ್ತಿರುವದರ ನಡುವೆಯೆ ಸರ್ಕಾರದ ಭರವಸೆಗಳು ಕೂಡ ಈಡೇರದೆ ರಂಗಭೂಮಿ ಕಲಾವಿದರು ಪರದಾಡುವಂತಾಗಿದೆ.ಕಳೆದ ಎರಡು ವರ್ಷಗಳಿಂದ ಕೋವಿಡ್ ಮತ್ತು ಲಾಕ್ ಡೌನ ಕಾರಣದಿಂದ ಶೋ ನಿಲ್ಲಿಸಿದ್ದಾಗಲೂ ಬದುಕಿನ ನೀರ್ವಹಣೆ ಕಷ್ಟದಾಯಕವಾಗಿ ಉಪಜೀವನಕ್ಕಾಗಿ ತರಕಾರಿ ಮಾರಿದ ಪ್ರಸಂಗಗಳು ಕೂಡ ನಡೆದಿದ್ದು ಸದ್ಯ ಅಥಣಿಗೆ ಬಹು ನಿರೀಕ್ಷೆ ಇಟ್ಟುಕೊಂಡು ಬಂದ ರಾಜು ತಾಳಿಕೋಟಿ ಅವರ ಒಡೆತನದ ರಂಗಭೂಮಿ ಕಲಾವಿದರು ಹತಾಶರಾಗುವ ಸ್ಥಿತಿ ನಿರ್ಮಾಣವಾಗಿದೆ.

ನಾಟಕ ವೀಕ್ಷಣೆಗಾಗಿ ಜನರನ್ನು ಸೆಳೆಯುವದಕ್ಕಾಗಿ  ಸದ್ಯ ಟಿವಿ ಕಲಾವಿದರನ್ನು ಕರೆಸುವ ಪ್ರಯತ್ನಗಳು ನಡೆಯುತ್ತಿದ್ದು ಶನಿವಾರದಿಂದ ಗೌಡ್ರ ಗದ್ದಲ ನಾಟಕದಲ್ಲಿ ಚಲನಚಿತ್ರ ಕಲಾವಿದೆ ಪಂಕಜ ಅವರು ನಟಿಸಲಿದ್ದಾರೆ.ಇನ್ನೂ ಕಂಪನಿಯ ವ್ಯವಸ್ಥಾಪಕ ಭೀಮಾಶಂಕರ ಅವರ ಮಗಳ ಮದುವೆ ಸಹಾಯಾರ್ಥವಾಗಿ ಕಳ್ಳಗುರು ಸುಳ್ಳ ಶಿಷ್ಯ ನಾಟಕದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ಕಲಾವಿದ ಸಂಜು ಬಸಯ್ಯ ಅವರು ಅಭಿನಯಿಸಲಿದ್ದು ಅಥಣಿ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಿ ಸಹಾಯ ಮಾಡಬಹುದು ಎಂಬ ನಿರೀಕ್ಷೆಯನ್ನು ಹಿರಿಯ ಕಲಾವಿದ ಮುನ್ನಾ ಕುಕನೂರ ವ್ಯಕ್ತಪಡಿಸಿದ್ದಾರೆ.

ಯೂ ಟ್ಯುಬ್,ಟಿವಿ ಶೋ,ಮತ್ತು ಮೊಬೈಲ್ ಹಾವಳಿಯಿಂದಾಗಿ ಕಲಾವಿದರ ಬದುಕು ಸಂಕಷ್ಟಕ್ಕೆ  ಸಿಲುಕದ್ದು ಶಿವಯೋಗಿ ನಾಡಿನ ಜನರು ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡು ಅಥಣಿಗೆ ಬಂದಿರುವ ಕಲಾವಿದರು ನಿರಾಸೆಯಿಂದ ತೆರಳುವಂತಾಗಬಾರದು ಆದ್ದರಿಂದ ನಾಟಕ ಕಂಪನಿಯ ಅತ್ಯುತ್ತಮ ನಾಟಕಗಳ ಪ್ರಚಾರವನ್ನು ಡಿಜೇಲ್ ಪೆಟ್ರೋಲ್ ದರ ಸಮರದಿಂದ ಮಾಡಲಾಗದೆ ಕಂಪನಿಯ ಕಷ್ಟಕ್ಕೆ ಜನರೇ ಸ್ಪಂದಿಸುವ ಅಗತ್ಯ ಇದ್ದು ತಾವು ನೋಡುವದರೊಂದಿಗೆ ಮತ್ತೊಬ್ಬರನ್ನು ಕರೆತರುವ ಮೂಲಕ ಕಲಾವಿದರ ಕೈ ಹಿಡಿಯಬೇಕಾಗಿದೆ ಎಂದು ಸಮಾಜ ಸೇವಕ ಹಾಗೂ ಸುವರ್ಣ ಕರ್ನಾಟಕ ಜನಸೇವಾ ಸಂಸ್ಥೆಯ ಅಧ್ಯಕ್ಷ ರವಿ ಪೂಜಾರಿ ಮನವಿ ಮಾಡಿದ್ದಾರೆ.