ಡಿಸೆಂಬರ್ 24ಕ್ಕೆ 1983ರ ಕ್ರಿಕೆಟ್ ವಿಶ್ವಕಪ್ ಆಧಾರಿತ ಚಲನಚಿತ್ರ 83 ಬಿಡುಗಡೆ

ಡಿಸೆಂಬರ್ 24ಕ್ಕೆ 1983ರ ಕ್ರಿಕೆಟ್ ವಿಶ್ವಕಪ್ ಆಧಾರಿತ ಚಲನಚಿತ್ರ 83 ಬಿಡುಗಡೆ
Udayaprabha Latest Breaking News Download App
Udayaprabha Latest Breaking News Download App
Udayaprabha Latest Breaking News Download App

ರಣವೀರ್​ ಸಿಂಗ್​ ನಟನೆಯ ಬಹುನಿರೀಕ್ಷಿತ ಸಿನಿಮಾ ‘83’ (83 Movie) ಈಗ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಕ್ರಿಸ್​ ಮಸ್​ ಹಬ್ಬದ ಪ್ರಯುಕ್ತ ಡಿ.24ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. 

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಆಟಗಾರರಲ್ಲಿ ಒಬ್ಬರಾದ ಕಪಿಲ್ ದೇವ್ (ರಣವೀರ್ ಸಿಂಗ್) ಅವರ ಜೀವನಚರಿತ್ರೆಯ ಚಲನಚಿತ್ರವಾಗಿದೆ.

ಖ್ಯಾತ ನಿರ್ದೇಶಕ ಕಬೀರ್​ ಖಾನ್​ ಆ್ಯಕ್ಷನ್​-ಕಟ್​ ಹೇಳಿರುವ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ. ಕಪಿಲ್​ ದೇವ್​ (Kapil Dev) ಪಾತ್ರದಲ್ಲಿ ರಣವೀರ್​ ಸಿಂಗ್​ ಅಭಿನಯಿಸಿದ್ದರೆ, ಅವರ ಪತ್ನಿ ರೋಮಿ ಭಾಟಿಯಾ ಪಾತ್ರವನ್ನು ದೀಪಿಕಾ ನಿರ್ವಹಿಸಿದ್ದಾರೆ.

ತಿಹಾರ್​ ರಾಜ್​ ಭಾಸಿನ್​, ಸಾಖಿಬ್​ ಸಲೀಮ್​, ಅಮೃತಾ ಪುರಿ, ಪಂಕಜ್​ ತ್ರಿಪಾಠಿ, ಚಿರಾಗ್​ ಪಾಟಿಲ್​, ಸಾಹಿಲ್​ ಕಟ್ಟರ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕ್ರಿಕೆಟ್​ ಮತ್ತು ಸಿನಿಮಾ ಜಗತ್ತಿಗೆ ಹತ್ತಿರದ ನಂಟು. ಹಲವು ಕ್ರಿಕೆಟ್​ ಆಟಗಾರರ ಬದುಕು ಈಗಾಗಲೇ ಸಿನಿಮಾ ರೂಪದಲ್ಲಿ ತೆರೆಮೇಲೆ ಬಂದಿದೆ. ಅದೇ ರೀತಿ 1983ರ ವಿಶ್ವಕಪ್​ ಗೆಲುವನ್ನು ತೆರೆಗೆ ತರಲು ‘83’ ಚಿತ್ರ ಪ್ರಯತ್ನಿಸಿದೆ.

ಈ ಸಿನಿಮಾಗಾಗಿ ಕ್ರಿಕೆಟ್​ ಪ್ರೇಮಿಗಳು ಮತ್ತು ಸಿನಿಪ್ರಿಯರು ಬಹಳ ತಿಂಗಳುಗಳಿಂದ ಕಾದಿದ್ದರು. ಆದರೆ ಕೊರೊನಾ ವೈರಸ್​ ಹಾವಳಿಯಿಂದಾಗಿ ಪದೇ ಪದೇ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತಿತ್ತು. ಈಗ ಅಂತಿಮವಾಗಿ ‘83’ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಟೀಸರ್ (83 Movie Teaser)​ ಮೂಲಕ ರಿಲೀಸ್​ ದಿನಾಂಕವನ್ನು ಖಚಿತಪಡಿಸಲಾಗಿದೆ. 

1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡವನ್ನು ಮಣಿಸಿದ ಘಟನೆಯನ್ನೇ ಆಧಾರವಾಗಿ ಇಟ್ಟುಕೊಂಡು ‘83’ ಸಿನಿಮಾ ಮೂಡಿಬಂದಿದೆ.

ಕಥಾಹಂದರವು ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಕ್ರಿಕೆಟ್ ವಿಶ್ವಕಪ್ (1983) ನಲ್ಲಿ ಭಾರತದ ಐತಿಹಾಸಿಕ ಗೆಲುವಿನ ಮೇಲೆ ವಿಶೇಷ ಗಮನವನ್ನು ಹೊಂದಿದೆ.  ಶೂಟಿಂಗ್ ಪ್ರಾರಂಭವಾಗುವ ಮೊದಲು ರಣವೀರ್ ಸಿಂಗ್ ಕಪಿಲ್ ದೇವ್ ಅವರಿಂದ ವಿಶೇಷ ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.  ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾಜಿ ಕ್ರಿಕೆಟಿಗರಾದ ಬಲ್ವಿಂದರ್ ಸಂಧು ಮತ್ತು ಯಶ್ಪಾಲ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ತಾರಾಗಣವು ತರಬೇತಿ ಪಡೆದು ನಿರ್ಮಿಸಲಾಗಿದೆ. 

ಟೀಸರ್​ ಹಂಚಿಕೊಂಡಿರುವ ರಣವೀರ್​ ಸಿಂಗ್​ ಅವರು ಟ್ರೇಲರ್​ ಬಿಡುಗಡೆಯ ದಿನಾಂಕವನ್ನು ತಿಳಿಸುವ ಮೂಲಕ ಇನ್ನಷ್ಟು ನಿರೀಕ್ಷೆ ಮೂಡಿಸಿದ್ದಾರೆ. ‘ಭಾರತದ ದೊಡ್ಡ ಗೆಲುವಿನ ಹಿಂದಿರುವ ಕಥೆಯನ್ನು ವಿವರಿಸುವ ‘83’ ಸಿನಿಮಾ ಡಿ.24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ತೆರೆಕಾಣಲಿದೆ. ನವೆಂಬರ್​ 30ರಂದು ಟ್ರೇಲರ್​ ಬಿಡುಗಡೆ ಆಗಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

1983 ವಿಶ್ವಕಪ್ ಕುರಿತು                                                        1983 ರ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ಪಂದ್ಯವು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 25 ಜೂನ್ 1983 ರಂದು ಇಂಗ್ಲೆಂಡನ ಲಾರ್ಡ್ಸ್‌ನಲ್ಲಿ ನಡೆದಿತ್ತು. ಇದು ವೆಸ್ಟ್ ಇಂಡೀಸ್‌ಗೆ ಕಳೆದ ಎರಡು ಕ್ರಿಕೆಟ್ ವಿಶ್ವಕಪ್‌ಗಳನ್ನು ಗೆದ್ದುಕೊಂಡಿರುವ ಸತತ ಮೂರನೇ ವಿಶ್ವಕಪ್ ಫೈನಲ್ ಪಂದ್ಯವಾಗಿತ್ತು.  ತನ್ನ ಮೊದಲ ಫೈನಲ್‌ನಲ್ಲಿ ಆಡುತ್ತಿದ್ದ ಕಪಿಲ್ ದೇವ್ ನಾಯಕತ್ವದ ಭಾರತದ ತಂಡವು ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ತನ್ನ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.  ಪಂದ್ಯದಲ್ಲಿ ಭಾರತದ ಗೆಲುವನ್ನು ಸಾಮಾನ್ಯವಾಗಿ ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಹೆಗ್ಗುರುತು ಕ್ಷಣವೆಂದು ಪರಿಗಣಿಸಲಾಗುತ್ತದೆ.