ನಾಲ್ಕನೇ ಬಾರಿ ಪಿಎಚ್ ಡಿ ಪಡೆದ ರಾಜ್ಯದ IAS ಅಧಿಕಾರಿ

ನಾಲ್ಕನೇ ಬಾರಿ ಪಿಎಚ್ ಡಿ ಪಡೆದ ರಾಜ್ಯದ  IAS ಅಧಿಕಾರಿ
Udayaprabha Latest Breaking News Download App
Udayaprabha Latest Breaking News Download App
Udayaprabha Latest Breaking News Download App

ಬೆಂಗಳೂರು :

ಡಾ.ಅಶೋಕ ದಳವಾಯಿಯವರಿಗೆ ನಾಲ್ಕನೇ ಬಾರಿ ಪಿಎಚ್ ಡಿ       (Phd) ಪದವಿ ದೊರೆಯಲಿದೆ.

ಒಡಿಸ್ಸಾ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದವರು ದಳವಾಯಿಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಿದ್ದಾರೆ. ಡಿಸೆಂಬರ್ 18, 2021ರಂದು ವಿಶ್ವವಿದ್ಯಾಲಯದ ಡಾ. ಎಂ.ಎಸ್.ಸ್ವಾಮಿನಾಥನ್ ಭವನದಲ್ಲಿ ಓಡಿಸ್ಸಾ ರಾಜ್ಯಪಾಲರು ಪದವಿ ಪ್ರದಾನ ಮಾಡಲಿದ್ದಾರೆ. ಈ ಮುಂಚೆ ದಳವಾಯಿಯವರು ಅರ್ಥಶಾಸ್ತ್ರ ವಿಷಯದಲ್ಲಿ ಪ್ರಬಂಧ ಮಂಡಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ ಎಚ್‌ಡಿ ಪಡೆದುಕೊಂಡಿದ್ದರು.

ನಂತರ ಅವರು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ನಡೆಸಿದ್ದ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಹಾಗು ಇತ್ತೀಚೆಗೆ ಗದಗನ ರಾಜೀವ ಗಾಂಧಿ ಪಂಚಾಯತ್ ರಾಜ್ಯ ಮತ್ತು ಗ್ರಾಮೀಣ ಅಭಿವೃದ್ಧಿ ವಿಶ್ವವಿದ್ಯಾಲಯದವರು ಗೌರವ ಡಾಕ್ಟರೇಟ್ ನೀಡಿದ್ದರು. ಐಎಎಸ್ ಅಧಿಕಾರಿ ನಾಲ್ಕು ಬಾರಿ ಪಿ ಎಚ್ ಡಿ ಪಡೆಯುತ್ತಿರುವುದು ಇದು ದೇಶದಲ್ಲಿಯೇ ಅಪರೂಪದ ಘಟನೆಯಾಗಿದ್ದು ಅಶೋಕ ದಳವಾಯಿಯವರು ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಕೌಜಲಗಿ ಮತ್ತು ಇಡೀ ಕನ್ನಡ ನಾಡಿಗೆ ಗೌರವ ತಂದಿದ್ದಾರೆ.

ಕೇಂದ್ರ ಸರ್ಕಾರದ ಪ್ರಸ್ತುತ ನ್ಯಾಷನಲ್ ರೈನ್ಫೆಡ್ ಏರಿಯಾ ಅಥಾರಿಟಿ(NRRA) ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.