ಅಹ್ಮದಾಬಾದ್‌: ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಪರಿಚಯವಾದ ಬಂದ ನಂತರ 10 ವರ್ಷದ ಬಾಲಕಿ 16 ವರ್ಷದ ಹುಡುಗನ ಜೊತೆ ಓಡಿಹೋದ ಘಟನೆ ಗುಜರಾತಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಹುಡುಗಿಯ ಮನೆಯವರು ದೂರು ನೀಡಿದ ಕೆಲವೇ ಗಂಟೆಗಳ ನಂತರ ಅವರು ಹತ್ತಿರದ ಹಳ್ಳಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.ಡಿಸೆಂಬರ್ 31 ರಂದು 5 ನೇ ತರಗತಿ ವಿದ್ಯಾರ್ಥಿನಿಯಾಗಿದ್ದ 10 ವರ್ಷದ ಬಾಲಕಿ ಧನ್ಸೂರ ಗ್ರಾಮದ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಗಂಟೆಗಟ್ಟಲೆ ಹುಡುಕಿದ ನಂತರ ಸಿಗದ ಕಾರಣ ಆಕೆಯ ಮನೆಯವರು ಬಾಲಕಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

 

ತನಿಖೆಯ ಸಮಯದಲ್ಲಿ, ಅಪ್ರಾಪ್ತ ವಯಸ್ಕರು ಇನ್ಸ್ಟಾಗ್ರಾಂ (Instagram)ನಲ್ಲಿ ಸಂಪರ್ಕಕ್ಕೆ ಬಂದರು ಮತ್ತು ಪ್ರೀತಿಸುತ್ತಿದ್ದರು ಎಂದು ಪೊಲೀಸರು ಕಂಡುಕೊಂಡರು. ಡಿಸೆಂಬರ್ 31 ರಂದು, ಅವರು ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದರು ಮತ್ತು ಅವರ ಮೂವರು ಸ್ನೇಹಿತರ ಸಹಾಯದಿಂದ ಅವರು ಓಡಿಹೋದರು ಎಂಬುದು ಗೊತ್ತಾಯಿತು.

ಹುಡುಗಿಯ ತಂದೆಗೆ ಸಾಮಾಜಿಕ ಮಾಧ್ಯಮದ ಬಗ್ಗೆ ಏನೂ ತಿಳಿದಿಲ್ಲ. 10 ವರ್ಷದ ಬಾಲಕಿ ತನ್ನ ತಾಯಿಯ ಫೋನ್‌ನಿಂದ ಇನ್‌ಸ್ಟಾಗ್ರಾಮ್ ಬಳಸಿದ್ದಾಳೆ ಮತ್ತು ಬೇರೆ ಹಳ್ಳಿಯಲ್ಲಿ ವಾಸಿಸುತ್ತಿದ್ದ ಹುಡುಗನೊಂದಿಗೆ ಸಂಪರ್ಕಕ್ಕೆ ಬಂದಿದ್ದಾಳೆ. ನಂತರ ಇಬ್ಬರೂ ಆಗಾಗ ಫೋನ್ ನಲ್ಲಿ ಮಾತನಾಡುತ್ತಿದ್ದರು ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ದೂರು ದಾಖಲಾದ ನಂತರ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿ ಮನೆಯವರಿಗೆ ಒಪ್ಪಿಸಿದ್ದಾರೆ. ಬಾಲಕಿಯ ಮನೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಇಂತಹ ಇನ್ನೊಂದು ಘಟನೆ ಬೆಳಕಿಗೆ ಬಂದಿದ್ದು, 15 ವರ್ಷದ ಬಾಲಕಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ 27 ವರ್ಷದ ಯುವಕನೊಂದಿಗೆ ಓಡಿಹೋದ ಘಟನೆ ವರದಿಯಾಗಿತ್ತು.