ಅಯೋಧ್ಯೆ :
ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಿರುವ ವಿವರಣೆಯಂತೆ ಅಪರೂಪದ ಬಿಲ್ಲನ್ನು ಇದೀಗ ರಾಮನಿಗಾಗಿ ತಯಾರಿಸಲಾಗಿದೆ.

ವಿವಿಧ ಬಾಣಗಳ ಬಗ್ಗೆ ವಿವರಣೆಗಳನ್ನು ಸಹ ಅದರಲ್ಲಿ ಉಲ್ಲೇಖಿಸಲಾಗಿದೆ. ಕಳೆದ 200 ವರ್ಷಗಳಿಂದ ಈ ವೃತ್ತಿಯಲ್ಲಿ ನುರಿತರಾಗಿರುವ ಚೆನ್ನೈ ಮೂಲದ ಕುಶಲಕರ್ಮಿಗಳು ತಯಾರಿಸಿದ್ದಾರೆ. 2.5 ಕೆಜಿ ತೂಕದ ಬಿಲ್ಲನ್ನು ತಯಾರಿಸಲು 23 ಕ್ಯಾರೆಟ್ ಸುಮಾರು 600- 700 ಗ್ರಾಂ ಚಿನ್ನ ಬಳಸಲಾಗಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಮುಂಚಿತವಾಗಿಯೇ ನಾವು ಚೆನ್ನೈನಿಂದ ಬಿಲ್ಲು ಮತ್ತು ಬಾಣಗಳನ್ನು ಪಡೆಯುತ್ತಿದ್ದೇವೆ. ಜನವರಿ 19ರಂದು ಅವುಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಗೆ ಹಸ್ತಾಂತರಿಸಲಾಗುತ್ತದೆ ಎಂದು ಅಮಾವ ರಾಮ ದೇವಾಲಯದ ಟ್ರಸ್ಟಿ ಶಯಾನ್ ಕುನಾಲ್ ತಿಳಿಸಿದ್ದಾರೆ.

ಈ ಬಿಲ್ಲು 2.5 ಕೆಜಿ ತೂಕವಿದೆ. ರಾಮಮಂದಿರ ಪ್ರಾಣ ಪ್ರತಿಷ್ಠೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಬಿಲ್ಲನ್ನು ತರಲು ಈಗಾಗಲೇ ಸಮಯ ನಿಗದಿಪಡಿಸಲಾಗಿದೆ