ಕಕ್ಕೇರಿ: ಖಾನಾಪುರ ತಾಲೂಕಿನ ಕಕ್ಕೇರಿ ಭೂರಣಕಿ, ರಾಮಾಪುರ,ಸುರಪುರ ಕೇರವಾಡ, ಮಾಸ್ಕೆನಟ್ಟಿ,ಸುರಪುರ ,ಬೀಡಿ, ತೊಲಗಿ, ಗಂದಿಗವಾಡ , ಲಿಂಗನಮಠ, ಚುಂಚವಾಡ, ಕರಿಕಟ್ಟಿ, ಗೋಧೋಳಿ, ಗುಂಡಳ್ಳಿ, ಸೇರಿದಂತೆ ಹಲವಾರು ಗ್ರಾಮಗಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ನಿಮಿತ್ತ ಶುಕ್ರವಾರ ಶಿಕ್ಷಕಿಯರು ಆರತಿ ಬೆಳಗಿ, ಗುಲಾಬಿ ಹೂ ನೀಡಿ, ಸಿಹಿ ತಿನ್ನಿಸಿ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಶಾಲೆಯನ್ನು ತಳಿರು ತೋರಣ ಮತ್ತು ಬ್ಯಾನರುಗಳಿಂದ ಅಲಂಕರಿಸಲಾಗಿತ್ತು.
ಶಾಲೆಯಲ್ಲಿ ಹಬ್ಬದ ವಾತಾವರಣ ಉಂಟಾಗಿತ್ತು ಶಾಲಾ ಮಕ್ಕಳು ಖುಷಿಯಿಂದ ಆಟ ಪಾಠದಲ್ಲಿ ಪಾಲ್ಗೊಂಡಿದ್ದರು.
ಕಕ್ಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ ಕುಕಡೋಳ್ಳಿ ಮಾತನಾಡಿ, ವಿದ್ಯೆ ಬಹು ಮುಖ್ಯ. ಅದರ ಜೊತೆಗೆ ಶಿಕ್ಷಕರು ಹೇಳಿದಂತೆ ವಿದ್ಯಾಭ್ಯಾಸ ಮಾಡಿದಲ್ಲಿ ಉನ್ನತ ಅಧಿಕಾರಿಗಳು ಹಾಗೂ ಗಣ್ಯರು, ಕ್ರೀಡಾಪಟುಗಳು, ಜನಪ್ರತಿನಿಧಿಗಳು, ಆಗಲು ಸಾಧ್ಯವೆಂದರು.
ಶಾಲಾ ಮುಖ್ಯೋಪಾಧ್ಯಾಯ ಎಸ್ ವೈ ಪಾಟೀಲ ಮಾತನಾಡಿ, ಮಕ್ಕಳು ಬೇಸಿಗೆ ರಜೆಯಲ್ಲಿ ಆಟವಾಡಿ, ಪ್ರವಾಸಗಳನ್ನು, ಮಾಡಿದ್ದೀರಿ, ಇನ್ನು ಮುಂದೆ ಶಾಲೆ ತಪ್ಪಿಸದೆ ದಿನನಿತ್ಯ ಬಂದು ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿಕೊಳ್ಳಿ ಎಂದು ಹೇಳಿದರು.
ಶಿಕ್ಷಕರಾದ ಎಸ್ ಬಿ ಬಡಿಗೇರ, ಚೆನ್ನಮ್ಮ ಬಾವಿಮನಿ, ಎನ್ ಎಂ ಬೆಳಗಾಂವಕರ, ಬಿ ಜಿ ತಿಪ್ಪಣ್ಣವರ , ಎ ಎಚ್ ತಹಸಿಲ್ದಾರ, ಆರ್ ಎನ್ ತಳವಾರ, ಹಾಗೂ ಮುದ್ದು ಮಕ್ಕಳು,ಪಾಲಕರು, ಇತರರು ಉಪಸ್ಥಿತರಿದ್ದರು.