ಯಲ್ಲಾಪುರ: ಅರಣ್ಯ ಇಲಾಖೆಯ ನಿರ್ಬಂಧವನ್ನು ಮೀರಿ ತಾಲೂಕಿನ ಇಡಗುಂದಿ ವಲಯದ ಮಾಗೋಡು ಗ್ರಾಮದ ಕುಳಿಮಾಗೋಡು ಜಲಪಾತಕ್ಕೆ ತೆರಳಿದ ಇಬ್ಬರು ಪ್ರವಾಸಿಗರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ತಾಲೂಕಿನಲ್ಲಿ ತೀವ್ರ ಮಳೆಯಾಗುತ್ತಿದ್ದು, ಇದರಿಂದಾಗಿ ನೀರಿನ ಹರಿವು ಹೆಚ್ಚಾಗಿದ್ದು ಪ್ರವಾಸಿಗರ ಜೀವಕ್ಕೆ ಅಪಾಯವಾಗುವ ಸಂಭವವಿರುವುದರಿಂದ ಕುಳಿಮಾಗೋಡು ಜಲಪಾತಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಈ ನಿರ್ಬಂಧವನ್ನು ಮೀರಿ ಹುಬ್ಬಳ್ಳಿಯ ಶ್ರೀಧರ ಈರಣ್ಣ ಪೂಜಾರ (32) ಹಾಗೂ ವಿನಾಯಕ ಶರಣಪ್ಪ ನಾಗರಾಳ (28) ಇವರಿಬ್ಬರು ಕರ್ನಾಟಕ ಅರಣ್ಯಕಾಯ್ದೆಯನ್ನು ಉಲ್ಲಂಘಿಸಿ, ಅನಧಿಕೃತವಾಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರವೇಶಿಸಿದ್ದರಿಂದ ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ ಪಿ ಅವರ ನಿರ್ದೇಶನದಂತೆ ಮಂಚಿಕೇರಿ ಉಪ ವಿಭಾಗದ ಸಹಾಯಕಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಮಾರ್ಗದರ್ಶನದಲ್ಲಿ ಹಾಗೂ ಇಡಗುಂದಿ ವಲಯಅರಣ್ಯ ಅಧಿಕಾರಿಗಳಾದ ಶಿಲ್ಪಾ ಎಸ್. ನಾಯ್ಕರವರ ನೇತೃತ್ವದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಗುರುಪ್ರಸಾದ್ ಕೆ, ಬೀಟ್ ವನಪಾಲಕ ಕಾಶಿನಾಥ ಯಂಕಂಚಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗಿಯಾಗಿದ್ದರು.