ತೆರೆದ ಕೊಳವೆ ಬಾವಿ ದುರಂತಕ್ಕೆ ಮನಮಿಡಿದ ಪ್ರಗತಿಪರ ರೈತರೊಬ್ಬರು ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಗಂಗಾವತಿ ಪಟ್ಟಣದ ಪ್ರಗತಿಪರ ರೈತ ಶಿವಪ್ಪ ಅವರು 500 ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

ಗಂಗಾವತಿ : ಕೊಪ್ಪಳ ಜಿಲ್ಲೆಯಲ್ಲಿರುವ ನಿರುಪಯುಕ್ತ ತೆರೆದ ಕೊಳವೆಬಾವಿ ಮುಚ್ಚುವವರಿಗೆ ರೂ. 500 ಬಹುಮಾನ ನೀಡುವುದಾಗಿ ನಗರದ ರೈತ ಶಿವಣ್ಣ ಇದೀಗ ಘೋಷಣೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೊರೆಸಿದ ಕೊಳವೆ ಬಾವಿ ವಿಫಲವಾದ ನಂತರ ಮುಚ್ಚದಿದ್ದರೆ ಆಗುವ ಅನಾಹುತ ಗೊತ್ತಿದ್ದರೂ ಜನ ಅವುಗಳನ್ನು ಮುಚ್ಚಲು ಮುಂದಾಗುತ್ತಿಲ್ಲ. ಈ ದಿಸೆಯಲ್ಲಿ ಬೀದಿ ನಾಟಕ ಮಾಡಿದ್ದೇನೆ, ಆದರೂ ಜನ ಎಚ್ಚೆತ್ತುಕೊಂಡಿಲ್ಲ. ಈ ಹಿನ್ನಲೆಯಲ್ಲಿ ಇದೀಗ ಬಹುಮಾನ ಘೋಷಣೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.