Join The Telegram | Join The WhatsApp |
ಬೆಳಗಾವಿ :
ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಬೆಳಗಾವಿಯ ಕೆಎಲ್ ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಡಿಎಲ್ ಎಸ್ ಎ, ಕೆಎಸ್ ಎಚ್ ಆರ್ ಎಚ್ ಸಹಯೋಗದಲ್ಲಿ ಶನಿವಾರ ಆಚರಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಡಿಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಪಿ.ಮುರಳಿ ಮೋಹನ ರೆಡ್ಡಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ದೇಶದ ಬೆಳವಣಿಗೆಯನ್ನು ಆರ್ಥಿಕವಾಗಿ ಮಾತ್ರ ಅಳೆಯದೆ, ಸ್ವಾತಂತ್ರ್ಯ ನೀಡಿದಂತಹ ಸೂಚಕಗಳು ಮತ್ತು ನಿಯತಾಂಕಗಳ ಮೇಲೆ ಅಳೆಯಬೇಕು. ನಾಗರಿಕರಿಗೆ, ಮಾನವ ಅಭಿವೃದ್ಧಿ ಸೂಚ್ಯಂಕ ಇತ್ಯಾದಿ ಗಮನಿಸಬೇಕು ಎಂದು ಹೇಳಿದರು.
ಭಾರತದ ಸಂವಿಧಾನದ 21 ನೇ ವಿಧಿಯ ಬಗ್ಗೆ ವಿವರಿಸಿದರು.ಜಂಟಿ ನಿರ್ದೇಶಕಿ (ಉದ್ಯೋಗ ವಿಭಾಗ) ಸಾಧನಾ ಎ.ಪೋತೆ ಅವರು ಸಂವಿಧಾನದಲ್ಲಿ ಉಲ್ಲೇಖಿಸಿರುವ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸದೃಢರಾಗಿ ಮತ್ತು ಮೌಲ್ಯವನ್ನು ಆಧರಿಸಿರಬೇಕೆಂದು ಅವರು ಸಲಹೆ ನೀಡಿದರು.
ಡಾ. ರವೀಂದ್ರ ತೋಟಗೇರ ಮತ್ತು ಗುರುನಾಥ ಬಿ. ಬೋರಿ ಅವರು ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿದರು. ಪ್ರಕಾಶ ಐಹೊಳೆ ಮಾನವ ಹಕ್ಕುಗಳ ದಿನಾಚರಣೆಯ ಕಾರಣ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್ ಅಧ್ಯಕ್ಷತೆ ವಹಿಸಿ, 1948 ರಲ್ಲಿ ಯುಎನ್ ಜನರಲ್ ಅಸೆಂಬ್ಲಿಯಿಂದ ಅಂಗೀಕರಿಸಲ್ಪಟ್ಟ ಮಾನವ ಹಕ್ಕುಗಳ ದಿನಾಚರಣೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.
ಸಮಾರಂಭವನ್ನು ಕಾಲೇಜಿನ ಕಾನೂನು ನೆರವು ಕೋಶದ ಅಧ್ಯಕ್ಷ ಪ್ರೊ.ಚೇತನಕುಮಾರ್ ಟಿ.ಎಂ.ಸಂಯೋಜಿಸಿದ್ದರು. ಕಾಲೇಜಿನ ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ನೇಹಾ ಕುಲಕರ್ಣಿ ಪ್ರಾರ್ಥಿಸಿದರು. ಗೌರ ಸೂರ್ಕೋಡ್ ಅತಿಥಿಗಳನ್ನು ಪರಿಚಯಿಸಿದರು, ಕೀರ್ತಿ ಕೋಟಿ ಕವನ ವಾಚಿಸಿದರು, ಸೌಮ್ಯ ಶೆಟ್ಟಿ ವಂದಿಸಿದರು. ಮಲ್ಲಿಕಾರ್ಜುನ ಪೂಜಾರಿ ಸಮಾರಂಭದ ನೇತೃತ್ವ ವಹಿಸಿದ್ದರು.
Join The Telegram | Join The WhatsApp |