ಚಂಡೀಗಢ:
ಭಾರತದ ಹೆಚ್ಚು ಗುಂಡಿಗಳು ಜನರಿಗೆ ಕಿರಿಕಿರಿ, ಗಾಯಗಳು ಮತ್ತು ಸಾವುಗಳಿಗೆ ಕಾರಣವಾಗಿವೆ. ಆದರೆ ಗುರುವಾರ ಹರಿಯಾಣದ 80 ವರ್ಷದ ವ್ಯಕ್ತಿಯೊಬ್ಬರಿಗೆ ಅಕ್ಷರಶಃ ಜೀವರಕ್ಷಕವಾಗಿ ಪರಿಣಮಿಸಿದೆ ಎಂದು ಅವರ ಕುಟುಂಬವು ಹೇಳಿಕೊಂಡಿದೆ.
ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ದರ್ಶನ್ ಸಿಂಗ್ ಬ್ರಾರ್ ಎಂಬವರ ದೇಹವನ್ನು ಪಟಿಯಾಲದಿಂದ ಕರ್ನಾಲ್ ಬಳಿಯ ಅವರ ಮನೆಗೆ ಕೊಂಡೊಯ್ಯಲಾಗುತ್ತಿತ್ತು. ದುಃಖಿತ ಸಂಬಂಧಿಕರು ಜಮಾಯಿಸಿದ್ದರು, ಅವರ ಅಂತ್ಯಕ್ರಿಯೆಗಾಗಿ ಕಟ್ಟಿಗೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ ಇದೇ ವೇಳೆ ದೇಹವನ್ನು ಒಯ್ಯುತ್ತಿರುವಾಗ ಆಂಬ್ಯುಲೆನ್ಸ್ ಗುಂಡಿಗೆ ಬಿದ್ದಿತು.
ಆಗ ದರ್ಶನ್ ಸಿಂಗ್ ಬ್ರಾರ್ ಅವರ ಮೊಮ್ಮಗ ದೇಹ ಚಲಿಸುತ್ತಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ಆಂಬ್ಯುಲೆನ್ಸ್ ಚಾಲಕನಿಗೆ ಹತ್ತಿರದ ಆಸ್ಪತ್ರೆಗೆ ಹೋಗಲು ಹೇಳಿದರು. ಆಸ್ಪತ್ರೆ ತಲುಪಿದ ನಂತರ ಅಲ್ಲಿನ ವೈದ್ಯರು ದರ್ಶನ್ ಸಿಂಗ್ ಬ್ರಾರ್ ಬದುಕಿದ್ದಾನೆ ಎಂದು ಹೇಳಿದರು.
80 ವರ್ಷದ ಹೃದ್ರೋಗಿ ಈಗ ಕರ್ನಾಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಕುಟುಂಬವು ಘಟನೆಯನ್ನು ಪವಾಡ ಎಂದು ಶ್ಲಾಘಿಸಿದೆ ಮತ್ತು ದರ್ಶನ್ ಸಿಂಗ್ ಬ್ರಾರ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತಿದೆ.
ಹತಾಶೆಯಿಂದ ಭರವಸೆಗೆ
ದರ್ಶನ್ ಸಿಂಗ್ ಬ್ರಾರ್ ಬ್ರಾರ್ ಅವರ ಮೊಮ್ಮಕ್ಕಳಲ್ಲಿ ಒಬ್ಬರಾದ ಬಲ್ವಾನ್ ಸಿಂಗ್, 80 ವರ್ಷದ ದರ್ಶನ್ ಸಿಂಗ್ ಬ್ರಾರ್ ಅವರು ಕರ್ನಾಲ್ ಬಳಿಯ ನಿಸಿಂಗ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ಇಡೀ ಕಾಲೋನಿಗೆ ಅವರ ಹೆಸರನ್ನು ಇಡಲಾಗಿದೆ ಎಂದು ಹೇಳಿದರು. ಕೆಲವು ದಿನಗಳಿಂದ ಬ್ರಾರ್ ಚೇತರಿಸಿಕೊಂಡಿರಲಿಲ್ಲ ಮತ್ತು ಬಲ್ವಾನ್ ಸಿಂಗ್ ಅವರ ಸಹೋದರ ಅಜ್ಜನನ್ನು ಚಿಕಿತ್ಸೆಗಾಗಿ ಪಟಿಯಾಲಾದ ತಮ್ಮ ಮನೆಯ ಸಮೀಪವಿರುವ ಆಸ್ಪತ್ರೆಗೆ ಕರೆದೊಯ್ದರು.
ನಾಲ್ಕು ದಿನಗಳಿಂದ ದರ್ಶನ್ ಸಿಂಗ್ ಬ್ರಾರ್ ವೆಂಟಿಲೇಟರ್‌ನಲ್ಲಿದ್ದರು ಮತ್ತು ಗುರುವಾರ ಬೆಳಿಗ್ಗೆ ಅವರ ಹೃದಯ ಬಡಿತ ನಿಂತಿದೆ ಎಂದು ವೈದ್ಯರು ಹೇಳಿದರು ಎಂದು ಬಲ್ವಾನ್ ಹೇಳಿದರು. ಅವರನ್ನು ವೆಂಟಿಲೇಟರ್‌ನಿಂದ ಹೊರತೆಗೆಯಲಾಯಿತು ಮತ್ತು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
“ನಮ್ಮ ಅಜ್ಜನ ಸಾವಿನ ಬಗ್ಗೆ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪಟಿಯಾಲದಲ್ಲಿರುವ ನನ್ನ ಸಹೋದರ ನಮಗೆ ಮಾಹಿತಿ ನೀಡಿದ ಮತ್ತು ಅವರ ಅಂತ್ಯಕ್ರಿಯೆಗಾಗಿ ಆಂಬ್ಯುಲೆನ್ಸ್‌ನಲ್ಲಿ ನಿಸಿಂಗ್‌ಗೆ (ಸುಮಾರು 100 ಕಿಮೀ ದೂರ) ಕರೆದುಕೊಂಡು ಹೋಗುತ್ತಿದ್ದರು. ನಾವು ನಮ್ಮ ಸಂಬಂಧಿಕರು ಮತ್ತು ಅವರ ಪರಿಚಯದವರು ಹಾಗೂ ಇತರ ಸ್ಥಳೀಯ ನಿವಾಸಿಗಳಿಗೆ ಮಾಹಿ ನೀಡಿದೆವು. ಅವರು ಈಗಾಗಲೇ ನಿಧನಕ್ಕೆ ಸಂತಾಪ ಸೂಚಿಸಲು ಮನೆ ಜಮಾಯಿಸಿದ್ದರು. ಟೆಂಟ್ ಅನ್ನು ಹಾಕಲಾಯಿತು ಮತ್ತು ದುಃಖಿತರಿಗೆ ಆಹಾರದ ವ್ಯವಸ್ಥೆ ಮಾಡಲಾಗಿತ್ತು. ನಾವು ಶವಸಂಸ್ಕಾರಕ್ಕಾಗಿ ಕಟ್ಟಿಗೆಯನ್ನು ಸಹ ತರಿಸಿದ್ದೆವು ಎಂದು ಬಲ್ವಾನ್ ಶುಕ್ರವಾರ ಹೇಳಿದರು.
ಆಂಬ್ಯುಲೆನ್ಸ್ ಹರಿಯಾಣದ ಕೈತಾಲ್‌ನ ಧಂಡ್ ಗ್ರಾಮದ ಬಳಿ ಬರುತ್ತಿದ್ದಾಗ, ಅದು ರಸ್ತೆ ಗುಂಡಿಯಲ್ಲಿ ಸಿಲುಕಿಕೊಂಡಿದೆ. ಗಾಡಿಯ ಬಿದ್ದ ರಭಸಕ್ಕೆ ಬ್ರಾರ್ ತನ್ನ ಕೈಯನ್ನು ಅಲ್ಲಾಡಿಸುವುದನ್ನು ಬಲ್ವಾನ್ ಸಹೋದರ ಗಮನಿಸಿದ್ದಾನೆ. ಆಶ್ಚರ್ಯಚಕಿತನಾದ ಆತ ಹೃದಯ ಬಡಿತವನ್ನು ಪರೀಕ್ಷಿಸಿದ್ದಾನೆ ಮತ್ತು ಹೃದಯ ಬಡಿತವಾಗುತ್ತಿದೆ ಎಂದು ಗ್ರಹಿಸಿದ ನಂತರ 80 ವರ್ಷ ವಯಸ್ಸಿನ ಬ್ರಾರ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಸ್ಪತ್ರೆಯ ವೈದ್ಯರು ಬ್ರಾರ್ ಜೀವಂತವಾಗಿದ್ದಾರೆ ಮತ್ತು ಉಸಿರಾಡುತ್ತಿದ್ದಾರೆ ಎಂದು ದೃಢಪಡಿಸಿದರು ಮತ್ತು ನಂತರ ಅವರನ್ನು ನೈಸಿಂಗ್‌ನಲ್ಲಿರುವ ಆಸ್ಪತ್ರೆಗೆ ಕಳುಹಿಸಿದರು, ಅಲ್ಲಿಂದ ಅವರನ್ನು ಕರ್ನಾಲ್‌ನ ಎನ್‌ಪಿ ರಾವಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕುಟುಂಬ ತಿಳಿಸಿದೆ.
ರಾವಲ್ ಆಸ್ಪತ್ರೆಯ ವೈದ್ಯ ಡಾ.ನೇತ್ರಪಾಲ ಅವರು, “ರೋಗಿಯನ್ನು ನಮ್ಮ ಬಳಿಗೆ ಕರೆತಂದಾಗ, ಅವರು ಉಸಿರಾಡುತ್ತಿದ್ದರು ಮತ್ತು ರಕ್ತದೊತ್ತಡ ಮತ್ತು ನಾಡಿಮಿಡಿತವನ್ನು ಹೊಂದಿದ್ದರು, ಇತರ ಆಸ್ಪತ್ರೆಯಲ್ಲಿ ಏನಾಯಿತು ಎಂದು ನಮಗೆ ತಿಳಿದಿಲ್ಲ. ಇದು ತಾಂತ್ರಿಕ ದೋಷ ಅಥವಾ ಇನ್ನೇನೋ ಆಗಿರಬಹುದು” ಎಂದು ಹೇಳಿದರು.
“ನಾಲ್ಕು ದಿನಗಳಿಂದ ಅವರು ಪಟಿಯಾಲಾದಲ್ಲಿ ವೆಂಟಿಲೇಟರ್‌ನಲ್ಲಿದ್ದರು ಆದರೆ ಈಗ ಅವರು ಸ್ವಂತವಾಗಿ ಉಸಿರಾಡುತ್ತಿದ್ದಾರೆ ಎಂದು ಕುಟುಂಬ ಹೇಳಿದೆ. ಆದರೆ ಅವರು ಇನ್ನೂ ಗಂಭೀರರಾಗಿದ್ದಾರೆ ಮತ್ತು ಐಸಿಯುನಲ್ಲಿದ್ದಾರೆ. ಅವರ ಎದೆಯಲ್ಲಿ ಸೋಂಕಿರುವ ಕಾರಣ ಉಸಿರಾಟವು ಪ್ರಯಾಸದಾಯಕವಾಗಿದೆ” ಎಂದು ವೈದ್ಯರು ಹೇಳಿದ್ದಾರೆ.