ಬೆಳಗಾವಿ: ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ದಾಂಡೇಲಿ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಾನೂನು ಸಲಹೆಗಾರ, ಹಿರಿಯ ವಕೀಲ ಮತ್ತು ವಿಪ್ರ ಸಮಾಜದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ-72 ಮಂಗಳವಾರ ಸಂಜೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರು ಹೋಳಿ ಹಬ್ಬದ ಪ್ರಯುಕ್ತ ಕುಟುಂಬ ಸಮೇತರಾಗಿ ಬೆಳಗಾವಿ ಪ್ರವಾಸಕ್ಕೆ ಆಗಮಿಸಿದ್ದರು. ಬೆಳಗಾವಿಯಿಂದ ದಾಂಡೇಲಿಗೆ ತೆರಳಿ ಬುಧವಾರ ಸಂಜೆ ಮರಳಿ ಬಾಗಲಕೋಟೆ ವಾಪಸ್ ಆಗುವ ಯೋಜನೆ ಹಾಕಿಕೊಂಡಿದ್ದರು. ಆದರೆ ಮಂಗಳವಾರ ಸಂಜೆ ಬೆಳಗಾವಿಯಿಂದ ದಾಂಡೇಲಿಗೆ ತೆರಳುವ ಮಾರ್ಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಅವರ ಪುತ್ರ ಸಾಗರ್ ಅವರ ನಿಯಂತ್ರಣ ತಪ್ಪಿದ ವಾಹನ ಹೆದ್ದಾರಿ ಪಕ್ಕ ಉರುಳಿ ಕೆ.ಎಸ್. ದೇಶಪಾಂಡೆ ಮೃತಪಟ್ಟಿದ್ದಾರೆ. ಪತ್ನಿ,ಪುತ್ರ ಹಾಗೂ ಕುಟುಂಬಸ್ಥರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.