ಬೆಳಗಾವಿ : ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಅಪಹರಿಸಿ ಹಲ್ಲೆ ಮಾಡಿದ ಘಟನೆ ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ನಡುರಸ್ತೆಯಲ್ಲೇ ಹಲ್ಲೆ ಮಾಡಿ, ಮರ್ಮಾಂಗಕ್ಕೆ ಒದ್ದು ಹಲ್ಲೆ ನಡೆಸಲಾಗಿದೆ. ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದಲ್ಲಿ ಡಿ.29 ರಂದು ದೇವಲತ್ತಿ ಗ್ರಾಮದ ಮಹೇಶ ಸೀಮನಗೌಡ ಎಂಬುವರನ್ನು ಹಲ್ಲೆಗೈಯ್ಯಲಾಗಿದೆ.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹೇಶ ಸೀಮನಗೌಡ ಅವರನ್ನು ಅಪಹರಿಸಿ ಬಳಿಕ ಲೋಕೋಳಿ, ಪಾರಿಶ್ವಾಡ, ಕೊಡಚವಾಡ, ಬಡಸ ಊರುಗಳಲ್ಲಿ ಸುತ್ತಾಡಿದ್ದರು. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.