ದೆಹಲಿ :
ಛತ್ತೀಸ್ ಗಢದ ನೂತನ ಮುಖ್ಯಮಂತ್ರಿ ವಿಷ್ಣುದೇವ
ಸಾಯಿ ಅವರು ರೈತನ ಮಗ ಎನ್ನುವುದು ಇದೀಗ ಗಮನಸೆಳೆದಿದೆ.
ಛತ್ತೀಸ್‌ಗಢದ ಉತ್ತರ ಭಾಗದಲ್ಲಿರುವ ಆದಿವಾಸಿ ಪ್ರಾಬಲ್ಯದ ಜಾಶ್ ಪುರ ಜಿಲ್ಲೆಯಲ್ಲಿ 1964ರ ಫೆ.21ರಂದು ರೈತ ಕುಟುಂಬದಲ್ಲಿ ಜನಿಸಿದವರು ವಿಷ್ಣುದೇವ. 2 ಅವಧಿಗೆ ಅವಿಭಜಿತ ಮಧ್ಯಪ್ರದೇಶದ ಶಾಸಕರಾಗಿದ್ದರು. 1999 ರಿಂದ 2014 ರವರೆಗೆ 4 ಬಾರಿ ಲೋಕಸಭೆ ಸದಸ್ಯರಾಗಿದ್ದರು. 2014ರಲ್ಲಿ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರ ಉಕ್ಕು, ಗಣಿ ಖಾತೆ ರಾಜ್ಯ ಸಚಿವರಾಗಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರಾಜಿತವಾಗಿದ್ದರಿಂದ 2019ರ ಲೋಕಸಭೆ ಚುನಾವಣೆಯಲ್ಲಿ ಹಾಲಿ ಲೋಕಸಭೆ ಸದಸ್ಯಯಾರಿಗೂ ಟಿಕೆಟ್ ಕೊಟ್ಟಿರಲಿಲ್ಲ. ಹೀಗಾಗಿ ವಿಷ್ಣು ದೇವ ಸ್ಪರ್ಧೆ ಮಾಡಿರಲಿಲ್ಲ. ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಕಳೆದ ವರ್ಷವಷ್ಟೇ ಅವರ ಜಾಗಕ್ಕೆ ಹೊಸಬರನ್ನು ನೇಮಕ ಮಾಡಲಾಗಿತ್ತು. ಮಾಜಿ ಸಿಎಂ ರಮಣ್ ಸಿಂಗ್ ಅವರಿಗೆ ಆಪ್ತರು.