ಬೆಳಗಾವಿ: ಸ್ನೇಹಿತರ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದಲ್ಲಿ ನಡೆದಿದೆ.

ಹುಕ್ಕೇರಿ ತಾಲೂಕಿನ ಕೆಸರೂರ ಗ್ರಾಮದ ನಿಂಗಪ್ಪ ಬುಳ್ಳಾರ (25) ಕೊಲೆಯಾದ ವ್ಯಕ್ತಿ. ರುಸ್ತುಂಪೂರ ಗ್ರಾಮದ ಯಲ್ಲಪ್ಪ ಹಾಗೂ ಮಹೇಶ ಆರೋಪಿಗಳು. ಮದ್ಯ ಕುಡಿದ ಮತ್ತಿನಲ್ಲಿ ಮೂವರೂ ಗೆಳೆಯರ ಮಧ್ಯೆ ಜಗಳ ಆರಂಭವಾಗಿದೆ. ಆಗ ಉಳಿದಿಬ್ಬರು ನಿಂಗಪ್ಪ ಅವರನ್ನು ಕೊಲೆ ಮಾಡಿರುವ ಅನುಮಾನ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಟ್ಟಡ ಕಾಮಗಾರಿಯೊಂದರ ನಿರ್ಮಾಣಕ್ಕಾಗಿ ಆಗಮಿಸಿದ್ದ ಮೂವರು ಮದ್ಯ ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ. ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದು, ಈ ಕುರಿತು ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.