Join The Telegram | Join The WhatsApp |
ಬೆಂಗಳೂರು:
ಮಲಗುವ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿದ ವಿಚಾರದಲ್ಲಿ ಚಿಂದಿ ಆಯುವವರ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಉಪ್ಪಾರಪೇಟೆಯ ಕಪಾಲಿಗಲ್ಲಿಯಲ್ಲಿ ನಡೆದಿದೆ.
ಚಿಂದಿ ಆಯುವ ಸಂದೀಪ್ (33)ಮೃತಪಟ್ಟರೆ, ರವಿ, ಶಂಕರ್ ಹಾಗೂ ಕೆಂಚ ಸೇರಿ ಮೂವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಕೃತ್ಯವೆಸಗಿದ ಬಿಹಾರ ಮೂಲದ ಮುಹಮ್ಮದ್ ತೆರಿಸಾ ಎಂಬಾತನನ್ನು ಬಂಧಿಸಲಾಗಿದೆ.
ಮಾರ್ಚ್ 1ರ ಮುಂಜಾನೆ 3.30ರ ವೇಳೆಗೆ ಮೆಜೆಸ್ಟಿಕ್’ನ ಕಪಾಲಿಗಲ್ಲಿ ಬಳಿ ಘಟನೆ ನಡೆದಿದೆ. ಆರೋಪಿ ಹಾಗೂ ಗಾಯಗೊಂಡಿರುವ ಯುವಕರೆಲ್ಲರೂ ಚಿಂದಿ ಆಯ್ದು ಜೀವನ ನಡೆಸುತ್ತಿದ್ದರು. ಮೊನ್ನೆ ರಾತ್ರಿ ಮಲಗಿದ್ದಾಗ ಆರೋಪಿ ಮುಹಮ್ಮದ್, ಯುವಕರು ಮಲಗುವ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಸಂದೀಪ್ ಸೇರಿ ನಾಲ್ವರು ಮುಹಮ್ಮದ್’ನನ್ನು ಥಳಿಸಿ ಕಳುಹಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮುಹಮ್ಮದ್ ಮುಂಜಾನೆ 3 ಗಂಟೆ ವೇಳೆಗೆ ಬಂದು ಮರದ ದಿಂಬಿನಿಂದ ಮನಬಂದಂತೆ ಥಳಿಸಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದ ಸಂದೀಪ್ ಸಾವನ್ನಪ್ಪಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Join The Telegram | Join The WhatsApp |