ಭಾವನಗರ : ಗುಜರಾತಿನ ಭಾವನಗರದಲ್ಲಿ ರೈಲ್ವೆ ಹಳಿ ಮೇಲೆ ಬರುತ್ತಿದ್ದ ಸಿಂಹವನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಯಾವುದೇ ಭಯ ಅಥವಾ ಅಂಜಿಕೆ ಇಲ್ಲದೆ ಒಬ್ಬಂಟಿಯಾಗಿ ಓಡಿಸಿದ್ದಾರೆ.

ಘಟನೆಯ ವೀಡಿಯೊ ವೈರಲ್ ಆಗಿದ್ದು, ಲಿಲಿಯಾ ನಿಲ್ದಾಣದ ಬಳಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

ಸಿಂಹವು ರೈಲ್ವೆ ಟ್ರ್ಯಾಕ್ ದಾಟುತ್ತಿರುವಾಗ ಮತ್ತು ನಂತರ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಸಿಬ್ಬಂದಿಯನ್ನು ನೋಡುತ್ತ ಹೋಗುವುದನ್ನು ವೀಡಿಯೊ ತೋರಿಸುತ್ತದೆ.

ಸಿಂಹ ಹಳಿ ಮೇಲೆ ಬರುವುದನ್ನು ತಡೆಯಲು ಅರಣ್ಯ ಇಲಾಖೆ ಕೋಲು ಹಿಡಿದು ಸಿಂಹವನ್ನು ಬೆನ್ನಟ್ಟುವುದು ಕಂಡುಬರುತ್ತದೆ. ಅದನ್ನು ಟ್ರ್ಯಾಕ್‌ನಿಂದ ದೂರ ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಜನವರಿ 6 ರಂದು ಮಧ್ಯಾಹ್ನ 3 ಗಂಟೆಗೆ ಲಿಲ್ಯ ರೈಲ್ವೆ ನಿಲ್ದಾಣದ ಗೇಟ್ ಸಂಖ್ಯೆ ಎಲ್ಸಿ -31 ರಲ್ಲಿ ಈ ಘಟನೆಯನ್ನು ಸೆರೆ ಹಿಡಿಯಲಾಗಿದೆ ಎಂದು ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಂಭುಜಿ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ತಾಪಮಾನದಲ್ಲಿ ಕುಸಿತ ಕಂಡುಬರುತ್ತಿದ್ದಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಸಿಂಹಗಳ ರಕ್ಷಣೆಯ ಬಗ್ಗೆ ಅರಣ್ಯ ಇಲಾಖೆ ನೌಕರರು ಎಚ್ಚರಿಕೆ ವಹಿಸಿದ್ದಾರೆ. ರೈಲ್ವೆ ಇಲಾಖೆ ಈ ಬಗ್ಗೆ ನಿಗಾ ವಹಿಸುತ್ತಿದೆ. ಈ ಘಟನೆಯು ಅರಣ್ಯ ಇಲಾಖೆ ನೌಕರನ ಧೈರ್ಯ ಮತ್ತು ಜಾಗರೂಕತೆಯ ಬಗ್ಗೆ ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರವಾಗಿದೆ.