ಬಳ್ಳಾರಿ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಲ್ಲಿ ಇರುವ ನಟ ದರ್ಶನ್ ಪರವಾಗಿ ವಾದ ಮಾಡಲು ಬಳ್ಳಾರಿ ಜೈಲಿಗೆ ಮಾಜಿ ಕಳ್ಳ ಶಿಗ್ಲಿ ಬಸ್ಯಾ ಆಗಮಿಸಿ ದರ್ಶನ್ ಭೇಟಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾನೆ.

ದರ್ಶನ್ ಸಾಮಾನ್ಯ ಕೈದಿ. ಅವರ ಭೇಟಿಗೆ ಅವಕಾಶ ನೀಡಬೇಕು ಮತ್ತು ಜೈಲಿನ ಸ್ಥಿತಿಗತಿ ಬಗ್ಗೆ ವಿವರಣೆ ನೀಡಲು ಅವಕಾಶ ನೀಡುವಂತೆ ಶಿಗ್ಲಿ ಬಸ್ಯಾ ಮನವಿ ಮಾಡಿದ್ದ. ದರ್ಶನ್ ಅಥವಾ ನ್ಯಾಯಾಲಯ ಒಪ್ಪಿದರೆ ಅವರ ಪರ ವಾದ ಮಾಡಲು ಸಿದ್ಧ ಎಂದು ಬಸ್ಯಾ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾನೆ.

ಶಿಗ್ಲಿ ಬಸ್ಯಾ ಅಲಿಯಾಸ್ ಬಸವರಾಜ ಗಡ್ಡಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಹಾಗೂ ಬೈಲಹೊಂಗಲ ಸೇರಿದಂತೆ ರಾಜ್ಯದ ವಿವಿಧ ಕಡೆ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಂದ ಬಂಧಿಸಲ್ಪಟ್ಟು ನಂತರ ಆ ಪ್ರಕರಣಗಳಿಗೆ ಸಂಬಂಧಿಸಿದ ವಕೀಲರನ್ನು ನೇಮಕ ಮಾಡದೆ ತಾನೇ ಗೆಲ್ಲುತ್ತಿದ್ದ. ಈ ಹಿನ್ನಲೆಯಲ್ಲಿ ಇದೀಗ ದರ್ಶನ್ ಪರ ವಾದಕ್ಕೆ ಬಳ್ಳಾರಿ ಜೈಲಿಗೆ ಆಗಮಿಸಿದ್ದ.