ಬೆಳಗಾವಿ : ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೇಶ್ವರ ಎಂಬ ಗ್ರಾಮದಲ್ಲಿ ಇಂದು ಬೆಳಗ್ಗೆ 10:15 ರಿಂದ 10.30 ರ ಸುಮಾರಿಗೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆಗೈಯ್ಯಲಾಗಿದೆ.
ಘಟನೆಯಲ್ಲಿ ಮೌಲಾಸಾಬ್ ಯಾಸಿನ್ ಮೊಮಿನ್-28 ಮೃತಪಟ್ಟಿದ್ದಾನೆ. ಈತ ಮತ್ತು ಅಮೋಘ ಢವಳೇಶ್ವರನ ಪತ್ನಿ ಶಿಲ್ಪಾ ಎಂಬುವರು ಬೈಕಿನಲ್ಲಿ ಹೋಗುತ್ತಿದ್ದರು. ಆಗ ಲಾಂಗ್ ಹಿಡಿದು ಬಂದ ಅಮೋಘ ಢವಳೇಶ್ವರ ಭೀಕರವಾಗಿ ಕೊಲೆ ಮಾಡಿದ್ದಾನೆ. ಅಮೋಘನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.