ಕುಮಟಾ : ಮನೆ ಆವರಣದ ಬಳಿಯೇ ಇದ್ದ ಮಾವಿನ ಗಿಡ ಏರಿ ಕುಳಿತು ಕೆಲಕಾಲ ಆತಂಕ ಉಂಟು ಮಾಡಿದ್ದ ಬೃಹತ್‌ ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ ಎಂದು ವರದಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದ ಮನೆಯೊಂದರ ಆವರಣದಲ್ಲಿದ್ದ ಮಾವಿನ ಗಿಡದ ಏರಿದ್ದ ಬೃಹತ್‌ ಕಾಳಿಂಗ ಸರ್ಪವನ್ನು ಉರಗ ತಜ್ಞ ಅಶೋಕ ನಾಯ್ಕ ಎಂಬವರು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ಬರ್ಗಿ ಗ್ರಾಮದ ಮನೆಯೊಂದರ ಸಮೀಪ ಕಂಡು ಬಂದಿದ್ದ ಸುಮಾರು 13-14 ಅಡಿಗಳಷ್ಟು ಉದ್ದ ಬೃಹತ್‌ ಕಾಳಿಂಗ ನಂತರ ಅಲ್ಲಿಯೇ ಇದ್ದ ಮಾವಿನ ಗಿಡ ಏರಿ ಕುಳಿತಿತ್ತು ಎಂದು ಹೇಳಲಾಗಿದೆ. ಇದನ್ನು ನೋಡಿದ ಕುಟುಂಬಸ್ಥರು ಒಂದು ಕ್ಷಣ ಕಂಗಾಲಾದರು. ವಿಷಯ ತಿಳಿದ ಅಕ್ಕಪಕ್ಕದವರು ಆತಂಕಕ್ಕೆ ಒಳಗಾಗಿದ್ದರು.

ನಂತರ ಉರಗ ತಜ್ಞ ಅಶೋಕ ನಾಯ್ಕ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಅವರು ತಕ್ಷಣವೇ ಆಗಮಿಸಿದರು. ಮರ ಏರಿ ಕುಳಿತಿದ್ದ ಕಾಳಿಂಗ ಸರ್ಪವನ್ನು ಹಿಡಿಯುವುದು ಸವಾಲಿನ ಕೆಲಸವಾಗಿತ್ತು. ಆದರೆ ಅಶೋಕ ನಾಯ್ಕ ಅವರು ಈ ಬೃಹತ್‌ ಕಾಳಿಂಗವನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.