This is the title of the web page
This is the title of the web page

Live Stream

June 2023
S M T W T F S
 123
45678910
11121314151617
18192021222324
252627282930  

| Latest Version 9.4.1 |

Crime News

ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಸಂಕೇಶ್ವರ ಮತ್ತು ಹುಕ್ಕೇರಿ ಪೊಲೀಸ್ ಠಾಣೆಯ ಜಂಟಿ ಕಾರ್ಯಾಚರಣೆ : ಆರೋಪಿ ಬಂಧನ

Join The Telegram Join The WhatsApp

ಬೆಳಗಾವಿ : 

ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸಂಕೇಶ್ವರ ಮತ್ತು ಹುಕ್ಕೇರಿ ಪೊಲೀಸ್ ಠಾಣೆಯ ಜಂಟಿ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಬಂಧಿತನಿಂದ 169 ಗ್ರಾಂ ಚಿನ್ನಾಭರಣ 100 ಗ್ರಾಂ ಬೆಳ್ಳಿಯ ಆಭರಣ ಹೀಗೆ ಒಟ್ಟು 11,18,500 ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಫಕೀರಪ್ಪ ಕಾಂಬಳಿ ಎಂಬುವ ಬಂಧಿತ ಆರೋಪಿಯಾಗಿದ್ದಾನೆ. ಇದರಿಂದ ಶಂಕೇಶ್ವರ ಪೊಲೀಸ್ ಠಾಣೆ ನಾಲ್ಕು ಪ್ರಕರಣಗಳು ಮತ್ತು ಹುಕ್ಕೇರಿ ಪೊಲೀಸ್ ಠಾಣೆಯ ನಾಲ್ಕು ಪ್ರಕಾರಗಳು ಪತ್ತೆ ಆಗಿರುತ್ತವೆ.

ದಿ. 01/03/2023 ರಂದು ನಿಡಸೋಸಿ ಗ್ರಾಮದ ಬಳಿಯ ಒಂದು ಮನೆಯಲ್ಲಿ ರಾತ್ರಿ ಕಳ್ಳತನ ಆಗಿರುವ ಬಗ್ಗೆ ಪ್ರಕರಣ ವರದಿ ಆಗಿದ್ದು ಅಲ್ಲದೇ ವರ್ಷದ ಆರಂಭದಲ್ಲಿ ಸಂಕೇಶ್ವರ ಮತ್ತು ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ರಾತ್ರಿ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು.

ಈ ಬಗ್ಗೆ ತನಿಖೆ ನಡೆಸಲು ಹೇಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ, ಮತ್ತು ಡಿ. ಎಚ್ ಮುಲ್ಲಾ, ಡಿ.ಎಸ್.ಪಿ ಗೋಕಾಕರವರು ನೇತೃತ್ವದಲ್ಲಿ ಹುಕ್ಕೇರಿಯ ಸಿಪಿಐ ರಪೀಕ್ ತಹಸಿಲ್ದಾರ್ ಮತ್ತು ಸಿಬ್ಬಂದಿ ಮತ್ತು ಸಂಕೇಶ್ವರ ಪೊಲೀಸ್ ಠಾ ಣಿಯ ಸಿಪಿಐ ಪ್ರಹ್ಲಾದ ಚೆನ್ನಗೀರಿ ಹಾಗೂ ಸಿಬ್ಬಂದಿ ಒಳಗೊಂಡ ತನಿಖಾ ತಂಡವನ್ನು ರಚನೆ ಮಾಡಿಲಾಗಿತ್ತು.

ದಿ: 13/03/2023 ಸಂಕೇಶ್ವರ ಠಾಣಿ ಹದ್ದಿಯ ಕಮತನೂರ ಗೇಟ್ ಹತ್ತಿರ ಆರೋಪಿತನಿಗೆ ಪತ್ತೆ ಮಾಡಿ ಆತನ ಬಳಿ‌ ಇದ್ದ 169 ಗ್ರಾಂ ಬಂಗಾರದ ಆಭರಣಗಳು ಹಾಗೂ 100 ಗ್ರಾಂ ಬೆಳ್ಳಿಯ ಆಭರಣಗಳು, 14540/- ರೂ. ನಗದು ಹಣ,ಟಾಟಾ ಕಂಪನಿಯ ಮಾಂಜಾ ಕಾರ ನಂಬರ-ಕೆಎ. 22ಪಿ7662, ಹಿರೊ ಕಂಪನಿಯ ಮ್ಯಾಸ್ಕೊ ಮೋಟರ ಸೈಕಲ ನಂಬರ- ಕೆಎ. 19 ಇಜೆ7059 ಬಂಧಿತ ಆರೋಪಿತನಿಂದ 11,18,500 ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಸಂಕೇಶ್ವರ ಮತ್ತು ಹುಕ್ಕೇರಿ ಪೊಲೀಸ್ ಠಾಣೆಯ ಅಧಿಕಾರಿಗಳಾದ ಎಮ್. ಆರ್ ತಹಶಿಲ್ದಾರ, ಪಿ.ಆರ್ ಚನ್ನಗಿರಿ ಪಿ.ಐ, ಹಾಗೂ ಪಿ.ಎಸ್.ಐ ಕೆ.ಬಿ.ಜಕ್ಕನವರ, ಎ.ಎಸ್.ಐ ಯು.ಎಸ್. ಶೆಟ್ಟೆನ್ನವರ, ಹಾಗೂ ಸಿಬ್ಬಂದಿ ಜನರಾದ ಬಿ.ವಿ. ಹುಲಕುಂದ, ಬಿ. ಕೆ. ನಾಗನೂರಿ, ಎಮ್.ಎಮ್.ಕರಗುಪ್ಪಿ, ಬಿ.ಟಿ.ಪಾಟೀಲ, ಎಮ್. ಜಿ ದಾದಾಮಲಿಕ, ಬಿ.ಎಸ್.ಕಪರಟ್ಟಿ, ಎಮ್.ಎಮ್ ಜಂಬಗಿ ಹಾಗೂ ಹುಕ್ಕೇರಿ ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ಎ.ಎಸ್.ಸನದಿ, ಗಜಾನನ ಕಾಂಬಳೆ, ಅಜೀತ ನಾಯಿಕ, ಸದ್ದಾಂ ರಾಮದುರ್ಗ, ಇವರು ಪಾಲ್ಗೊಂಡಿರುತ್ತಾರೆ.

ಈ ಕಾರ್ಯಾಚರಣೆ ಮೂಲಕ ಆರೋಪಿನನ್ನು ಬಂಧಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸಂಜೀವ ಪಾಟೀಲ, ಅವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.


Join The Telegram Join The WhatsApp
Admin
the authorAdmin

Leave a Reply