ಬೆಳಗಾವಿ: ಯಳ್ಳೂರು ಹೊರವಲಯದಲ್ಲಿ ಶುಕ್ರವಾರ ಮದ್ಯದ ಮತ್ತಿನಲ್ಲಿ ಇಬ್ಬರು ಸೇರಿಕೊಂಡು ಇನ್ನೊಬ್ಬ ಸ್ನೇಹಿತನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಶಹಾಪುರದ ಪ್ರಕಾಶ ಚತುರ್ ಚಾಕು ಇರಿತಕ್ಕೆ ಒಳಗಾದವರು. ವಿಲಾಸ ಗುಂಡು ಗಾವಡೆ (54) ಮತ್ತು ಅವರ ಮಗ ಚೇತನ (24) ಬಂಧಿತರು. ಎಲ್ಲರೂ ಮರಾಠಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಹೋಳಿ ಹುಣ್ಣಿಮೆ ಅಂಗವಾಗಿ ಹೊಲದಲ್ಲಿ ಎಂಟು ಜನ ಸೇರಿ ಪಾರ್ಟಿ ಮಾಡುವಾಗ ಇಬ್ಬರ ನಡುವೆ ಜಗಳ ನಡೆದಿದ್ದು, ಸಿಟ್ಟಿಗೆದ್ದು ಚಾಕುವಿನಿಂದ ಇರಿದಿದ್ದಾರೆ. ಯಾವ ಕಾರಣಕ್ಕೆ ಜಗಳವಾಗಿದೆ ಎಂದು ತನಿಖೆ ಮಾಡಲಾಗುತ್ತಿದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ತಿಳಿಸಿದ್ದಾರೆ.