ಭದ್ರಾವತಿ :
ಭದ್ರಾವತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಚಿರತೆಯೊಂದನ್ನು ಅರಣ್ಯಾಧಿಕಾರಿಗಳ ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಭದ್ರಾವತಿ ವಲಯ ಅರಣ್ಯ ಅಧಿಕಾರಿ ದಿನೇಶ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಭದ್ರಾವತಿ ತಾಲೂಕಿನ ಮಾವಿನಕೆರೆ, ಮಾವಿನಕೆರೆ ಕಾಲೋನಿ, ಅಡ್ಲಘಟ್ಟ, ಶಿವಪುರ ಗ್ರಾಮಗಳಿಗೆ ಕೆಲ ದಿನಗಳಿಂದ ಚಿರತೆ ತಲೆನೋವಾಗಿ‌ ಪರಿಣಮಿಸಿತ್ತು. ದನ-ಕರು, ಕುರಿ-ಮೇಕೆ, ನಾಯಿಗಳನ್ನು ಹಿಡಿಯಲು ಗ್ರಾಮದೊಳಗೆ ಓಡಾಡಿಕೊಂಡಿದ್ದ ಚಿರತೆ ಗ್ರಾಮಸ್ಥರಿಗೆ ಭೀತಿ ಉಂಟು ಮಾಡಿತ್ತು.
ಅರಣ್ಯ ಇಲಾಖೆಯ ಸತತ ಕಾರ್ಯಾಚರಣೆ ಫಲವಾಗಿ, ಚಿರತೆಯನ್ನು ಬಂಧಿಸುವಲ್ಲಿ ಭದ್ರಾವತಿ ವಲಯ ಅರಣ್ಯಾಧಿಕಾರಿ ದಿನೇಶ್ ಕುಮಾರ್,
ಡಿ.ಆರ್.ಎಫ್.ಒ. ಅಣ್ಣನಾಯ್ಕ, ಮಂಜುನಾಥ ಇನ್ನಿತರರು ಯಶಸ್ವಿಯಾಗಿದ್ದಾರೆ.