Join The Telegram | Join The WhatsApp |
ಅಥಣಿ-
ಸಮ್ಮೇದ ಶಿಖರ್ಜಿಯನ್ನು ಪ್ರವಾಸ ತಾಣವನ್ನಾಗಿ ಮಾಡಲು ಹೊರಟಿರುವ ಜಾರ್ಖಂಡ್ ಸರಕಾರದ ಆದೇಶವನ್ನು ವಿರೋಧಿಸಿ ಅಥಣಿಯಲ್ಲಿ ಡಿಸೆಂಬರ್ 26, ಸೋಮವಾರ ನಗರದ ಮಹಾವೀರ ವ್ರತ್ತದಿಂದ ಅಂಬೇಡ್ಕರ್ ವ್ರತ್ತದವರೆಗೆ ಶಿಖರಜಿ ಬಚಾವೋ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಿದ್ದಾರೆ.
20 ತೀರ್ಥಂಕರರು ಮತ್ತು 20 ಕೋಟಿ ಜೈನರು ಮೋಕ್ಷ ಪಡೆದಿರುವ ಪವಿತ್ರ ಸ್ಥಳ ಸಮ್ಮೇದ ಶಿಖರ್ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ಜಾರ್ಖಂಡ್ ಸರ್ಕಾರಗಳು ಯಾವುದೇ ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಐತಿಹಾಸಿಕ ಸ್ಥಳವನ್ನು ಮಾರ್ಪಾಡು ಮಾಡಬಾರದು. ಯಥಾವತ್ ಸ್ವರೂಪವನ್ನು ಕಾಪಾಡಿಕೊಂಡು ಹೋಗುವಂತೆ ತಹಶೀಲ್ದಾರ್ ಮೂಲಕ ರಾಜ್ಯ, ಕೇಂದ್ರ ಸರ್ಕಾರ ಕ್ಕೆ ಮನವಿ ಸಲ್ಲಿಸಲು ಉದ್ದೇಶಿಸಿಸಲಾಗಿದೆ. ಈ ಪ್ರತಿಭಟನಾ ಆಂದೋಲನ ಕ್ಕೆ ತಾಲೂಕಿನ ಸಾವಿರಾರು ಜೈನ ಶ್ರಾವಕ ಶ್ರಾವಕಿಯರು ಭಾಗವಹಿಸಲಿದ್ದಾರೆ.
ಜೈನ ಧರ್ಮದ ಅತ್ಯಂತ ಮಂಗಳಕರ ಯಾತ್ರಾ ಸ್ಥಳವಾದ ಜಾರ್ಖಂಡ್ ರಾಜ್ಯದ ಸಮ್ಮೇದ್ ಶಿಖರ್ಜಿಯು ಪವಿತ್ರ ಕ್ಷೇತ್ರವಾಗಿದ್ದು ಜಾರ್ಖಂಡ್ ರಾಜ್ಯದ ಗಿರಿಧ ಜಿಲ್ಲೆಯ ಪಾರಸನಾಥ ಬೆಟ್ಟದ ಮೇಲಿರುವ ಮಧುಬನ್ ಎಂದು ಕರೆಯಲ್ಪಡುವ ಕ್ಷೇತ್ರವಾಗಿದೆ. ವಿಶ್ವಾದ್ಯಂತ ಜೈನ ಧರ್ಮದ ಜನರಿಗೆ ಇದು ಅತ್ಯಂತ ಪವಿತ್ರ ಸ್ಥಳವಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜೈನೇತರ ಜನರು ಶಿಖರ್ಜಿಯನ್ನು ವಿಹಾರ ತಾಣವೆಂದು ಭಾವಿಸಿ ಭೇಟಿ ನೀಡುತ್ತಾರೆ. ಅಲ್ಲಿಗೆ ಭೇಟಿ ನೀಡುವಾಗ ಅನೇಕರು ನಾನ್ವೆಜ್ ಫುಡ್, ಮದ್ಯವನ್ನು ಒಯ್ಯುತ್ತಾರೆ. ಇದು ಅಹಿಂಸಾವಾದಿಗಳಾದ ಜೈನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದ್ದು ಪ್ರವಾಸಿ ತಾಣವಾಗಿ ಘೋಷಣೆ ಮಾಡುವುದರಿಂದ ಅಭಿವೃದ್ಧಿ ಹೆಸರಿನಲ್ಲಿ ಕ್ಷೇತ್ರದ ಪಾವಿತ್ರ್ಯತೆ ಗೆ ಧಕ್ಕೆ ಉಂಟಾಗುವುದು ಎಂಬ ಅಭಿಪ್ರಾಯವಾಗಿದೆ.
Join The Telegram | Join The WhatsApp |