ಬೆಳಗಾವಿ : ಇಲ್ಲಿಯ ಶಹಾಪುರ ಮೀರಾಪುರದಲ್ಲಿ ಬಾಲ್ಯ ಜೀವನ ಕಳೆದ ಮೂಲತಃ ಬೆಳಗಾವಿಯವರಾದ ಶ್ರೀ ಥಾಣೇದಾರ್ ಎಂಬುವರು ಇದೀಗ ಅಮೆರಿಕದಲ್ಲಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.

ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯ ಥಾಣೇದರ್ ಅವರು ಈಗ ಬಹು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಆರು ಜನ ಮಕ್ಕಳಲ್ಲಿ ಒಬ್ಬರಾಗಿ ಬೆಳೆದ ಶ್ರೀ ಥಾಣೇದಾರ ಶಹಾಪುರ ಚಿಂತಾಮಣಿ ರಾವ್ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 55 ಅಂಕ ಪಡೆದರು. ವಿಜಯಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಪಡೆದರು. ಆದರೆ, ಬ್ಯಾಂಕ್ ಅವರಿಗೆ ಎಂಎಸ್ಸಿ ಪರೀಕ್ಷೆಗೆ ನಿರಾಕರಿಸಿತು. ಧಾರವಾಡದಲ್ಲಿ ಅಧ್ಯಯನ ಮುಂದುವರಿಸಲು ಆರಂಭಿಸಿದಾಗ ಅವರು ಕೆಲಸವನ್ನೇ ಕಳೆದುಕೊಂಡರು. 1977 ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಅವರು 1982 ರಲ್ಲಿ ಅಕ್ರಾನ್ ವಿಶ್ವವಿದ್ಯಾಲಯದಿಂದ ಪಾಲಿಮಾರ್ ರಸಾಯನ ಶಾಸ್ತ್ರದಲ್ಲಿ ಪಿಎಚ್ಡಿ ಪಡೆಯಲು ಅಮೆರಿಕಕ್ಕೆ ವಲಸೆ ಹೋದರು. 1979 ರಿಂದ ಅವರ ಅಮೆರಿಕದ ಜೀವನ ಪ್ರಾರಂಭವಾಯಿತು. 1990ರಲ್ಲಿ ಥಾಣೇದಾರ್ ಅವರು ಕೇವಲ ಮೂರು ಜನ ಉದ್ಯೋಗಗಳೊಂದಿಗೆ ಅತ್ಯಂತ ಸಣ್ಣ ಕಂಪನಿ, ಅದು ಸಹ ನಷ್ಟದಲ್ಲಿರುವ ಕಂಪನಿಯನ್ನು ನಡೆಸಿದರು. ಆದರೆ ಮುಂದೆ ಅದು ಬಲಾಢ್ಯವಾಗಿ ಬೆಳೆದು ನಿಂತಿತು. ಜೊತೆಗೆ ಥಾಣೇದಾರವರು ಈ ಹಿಂದೆಯೂ ಅಮೆರಿಕ ಕಾಂಗ್ರೆಸ್ಸಿಗೆ ಆಯ್ಕೆಯಾಗಿದ್ದಾರೆ.

ಪ್ರತಿಕ್ರಿಯೆ : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ವಿಶ್ವ ನಾಯಕರು ಅಭಿನಂದನೆ ಸಲ್ಲಿಸುತ್ತಿದ್ದಂತೆ, ಜನರು ಟ್ರಂಪ್ ಅವರನ್ನು ನೋಡಿಯೇ ಮತ ಹಾಕಿದ್ದಾರೆ ಎಂದು ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯ ಥಾನೇದರ್ ಗುರುವಾರ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಮತದಾರರಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ವಿವರಿಸಿದ್ದಾರೆ ಮತ್ತು ಮತದಾರರು ತಮ್ಮ ಕಳವಳ, ಭಯ ಮತ್ತು ಕಷ್ಟಗಳ ಬಗ್ಗೆ ಟ್ರಂಪ್‌ಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.

“ಆರ್ಥಿಕ ಪರಿಸ್ಥಿತಿಗೆ ಪ್ರಸ್ತುತ ಆಡಳಿತವು ಕಾರಣವಾಗಿದೆ ಎಂದು ಜನರು ಭಾವಿಸುತ್ತಾರೆ ಮತ್ತು ಅವರು ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಮತದಾರರ ಮನಸ್ಸಿನಲ್ಲಿರುವ 3 ವಿಭಿನ್ನ ವಿಷಯಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಡೊನಾಲ್ಡ್ ಟ್ರಂಪ್ ಅವರ ಕಾಳಜಿಯನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಮತದಾರರು ನೋಡಿದ್ದಾರೆ ಮತ್ತು ಈ ಸಮಯದಲ್ಲಿ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಬದಲಾವಣೆಯ ಹರಿಕಾರ ಎಂದು ಗಮನಿಸಿದ ಕಾರಣ ಜನರು ಡೊನಾಲ್ಡ್ ಟ್ರಂಪ್‌ಗೆ ಮತ ನೀಡಿದ್ದಾರೆ ಎಂದು ಹೇಳಿದರು.