ಬೆಳಗಾವಿ :
ಗೋಕಾಕ ಪಟ್ಟಣದ ಮರಾಠಾ ಗಲ್ಲಿಯ ನಿವಾಸಿಯಾದ ಶಿವಾಜಿ
ಸಂತಾರಾಮ ಕಾಗನಿಕರ(57) ಇವರು ಆರೋಗ್ಯದ ಕಾರಣ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಡಿಸೆಂಬರ್ 7 ರಂದು
ರಾತ್ರಿ 11 ಗಂಟೆ ಸುಮಾರಿಗೆ ಯಾರಿಗೂ ಹೇಳದೆ ಆಸ್ಪತ್ರೆಯಿಂದ ಹೋದವರು ಮರಳಿ ಬಂದಿಲ್ಲ ಎಂದು ಅವರ ಹೆಂಡತಿ
ರೇಖಾ ಶಿವಾಜಿ ಕಾಗಿನಕರ ಅವರು ಬೆಳಗಾವಿಯ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾದ ಯುವಕನ ವಿವರ: ಎತ್ತರ 5-7ಫೂಟ, ಗೋದಿಗೆಂಪು ಮೈಬಣ್ಣ, ಸದೃಢ ಮೈಕಟ್ಟು, ಬಿಳಿ ಹಾಗೂ ಕಪ್ಪು ಬಣ್ಣದ
ಉಡುಪು ಧರಿಸಿದ್ದು, ಕನ್ನಡ, ಮರಾಠಿ, ಹಿಂದಿ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಅಥವಾ ಪೊಲೀಸ್ ಇನ್ಸಪೆಕ್ಟರ್
ಎ.ಪಿ.ಎಂ.ಸಿ ಪೊಲೀಸ್‌ಠಾಣೆ ದೂರವಾಣಿ ಸಂಖ್ಯೆಃ (೦೮೩೧) ೨೪೦೫೨೫೦. ಮೋಬೈಲ್ ಃ ೯೪೮೦೮೦೪೧೦೬, ೯೪೮೦೮೦೪೦೪೭ ಗೆ
ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.