ಹುಬ್ಬಳ್ಳಿ:
ರಾಮಭಕ್ತರೊಬ್ಬರು ಕಾಲ್ನಡಿಗೆಯಲ್ಲೇ ಹುಬ್ಬಳ್ಳಿಯಿಂದ ಬರೋಬ್ಬರಿ 1799 ಕಿಮೀ ದೂರದ ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ.

ಹುಬ್ಬಳ್ಳಿ ಆನಂದ ನಗರದ ಘೋಡಕೇ ಪ್ಲಾಟ್ ನಿವಾಸಿ ಮನೋಜ್ ಪಾದಯಾತ್ರೆ ಮೂಲಕ ಅಯೋಧ್ಯೆಗೆ ಹೊರಟ ರಾಮಭಕ್ತ. ಡಿಸೆಂಬರ್ 22 ರಂದು ಹುಬ್ಬಳ್ಳಿಯಿಂದ ಕೈಯಲ್ಲಿ ಕರ್ನಾಟಕ ಧ್ವಜ,ಕೇಸರಿ ಧ್ವಜದೊಂದಿಗೆ ಪಾದಯಾತ್ರೆ ಹೊರಟಿದ್ದಾರೆ. ಸದ್ಯ ಮಧ್ಯಪ್ರದೇಶದಲ್ಲಿದ್ದಾರೆ.

ಪಾದಯಾತ್ರೆ ವೇಳೆ ಸ್ವಲ್ಪ ಕಷ್ಟವಾಗಿದ್ದು, ಚರ್ಮ ಸುಟ್ಟ ಹಾಗಾಗಿದೆ. ಕಷ್ಟ ಇದ್ದರೂ, ರಾಮನ ಹೆಸರು ಹೇಳಿ ಪಾದಯಾತ್ರೆ ಹೊರಟಿದ್ದೇನೆ ಎಂದು ಮನೋಜ್ ಹೇಳಿದ್ದಾರೆ. ದೇವಸ್ಥಾನ, ಪೆಟ್ರೋಲ್‌ನಲ್ಲಿ ವಾಸ್ತವ್ಯ ಮಾಡಿ ಪಾದಯಾತ್ರೆ ಮಾಡುತ್ತಿದ್ದು, ರಾಮನ ಪ್ರಾಣಪ್ರತಿಷ್ಠೆಗೆ ಅಯೋಧ್ಯೆಯಲ್ಲಿ ಇರಲಿದ್ದಾರೆ.