ಬ್ಯಾಡಗಿ: ಕರುನಾಡಿನ ಬ್ರಾಂಡ್ ಆಗಿರುವ ಬ್ಯಾಡಗಿ ಮೆಣಸಿನಕಾಯಿ ಜನಪ್ರಿಯತೆ ಯಾರಿಗೆ ಗೊತ್ತಿಲ್ಲ. ಇದು ಇದೀಗ ಮತ್ತೆ ತನ್ನ ಘಾಟ್ ನ್ನು ಎಲ್ಲೆಡೆ ಬೀರಿದೆ.

ಇಲ್ಲಿಯ ವಿಶ್ವಪ್ರಸಿದ್ದ ಮೆಣಸಿನಕಾಯಿ ಮಾರುಕಟ್ಟೆಯ ಇತಿಹಾಸದಲ್ಲೇ
ಸೋಮವಾರ ಮೊದಲ ಬಾರಿಗೆ 4.09 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಎಲ್ಲೆಂದರಲ್ಲಿ ಮೆಣಸಿನಕಾಯಿ ಚೀಲಗಳೇ ಕಾಣುತ್ತಿವೆ. ಕಳೆದ ವಾರ 3.34 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗುವ ಮೂಲಕ ನಿರ್ಮಿಸಿದ್ದ ದಾಖಲೆ ವಾರದಲ್ಲಿಯೇ ಧೂಳಿಪಟವಾಯಿತು. ವರ್ತಕರ ನಿರೀಕ್ಷೆಗೂ ಮೀರಿ ದಾಖಲೆಯ ಒಟ್ಟು 4,09,121 ಲಕ್ಷ ಚೀಲಗಳು ಅವಕವಾಗಿದ್ದು, ಈ ಮೆಣಸಿನ ಕಾಯಿ ವ್ಯವಹಾರ ನಿಭಾಯಿಸಲು ಹಾಗೂ ಪ್ರಕ್ರಿಯೆ ಮುಗಿಸುವ ಉದ್ದೇಶದಿಂದ ಮಾ.7 ಗುರುವಾರ ಮಾರುಕಟ್ಟೆಗೆ ರಜೆ ಘೋಷಿಸಲಾಯಿತು. ವಿಶ್ವದಲ್ಲೇ ಅತೀಹೆಚ್ಚು ಆವಕವಾಗುವ ದ್ವಿತೀಯ ಮಾರುಕಟ್ಟೆ ಎಂಬ ಖ್ಯಾತಿ ಪಡೆದಿರುವ ಬ್ಯಾಡಗಿ ಮಾರುಕಟ್ಟೆ ವಿಶ್ವದ ನಂ.1 ಸ್ಥಾನ ತಲುಪುವತ್ತ ದಾಪುಗಾಲು ಹಾಕುತ್ತಿದೆ. ಮೆಣಸಿನಕಾಯಿ ಆವಕ 13 ಬಾರಿ 1 ಲಕ ದಾಟಿದರೆ, 5 ಬಾರಿ ಎರಡು ಲಕ ದಾಟಿದೆ, 2 ಬಾರಿ 3 ಲಕ್ಷ ದಾಟಿದ್ದು, ಇದೀಗ ಪ್ರಥಮ ಬಾರಿಗೆ 4 ಲಕ್ಷ ದಾಟಿದೆ.