ಪುತ್ತೂರು: ದ.ಕ.ಜಿಲ್ಲೆಯ ಮಂಗಳೂರು ಬಿಟ್ಟರೆ ಪುತ್ತೂರು ಅತೀ ದೊಡ್ಡ ಪಟ್ಟಣವಾಗಿರುತ್ತದೆ. ಪುತ್ತೂರಿನ ಹಲವಾರು ಹಿರಿಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರುತ್ತಾರೆ.

ಸಹಕಾರ ಚಳುವಳಿ ಕೂಡ ಪುತ್ತೂರಿನಿಂದ ಪ್ರಾರಂಭವಾದ ಇತಿಹಾಸವಿರುತ್ತದೆ. ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿರುವ ಪುತ್ತೂರಿನ ನಗರಸಭಾ ವ್ಯಾಪ್ತಿಯ ಹಿಂದಿನ ಕೋರ್ಟು ಮೈದಾನ ಈಗಿನ ಕಿಲ್ಲೆ ಮೈದಾನವು ಹೆಸರುವಾಸಿಯಾದ ಸ್ಥಳವಾಗಿರುತ್ತದೆ. ಸದರಿ ಕಿಲ್ಲೆ ಮೈದಾನವನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದ್ದು ಇಲ್ಲಿ ನಗರಸಭೆಯ ನಮ್ಮ ಆಡಳಿತದ ಅವಧಿಯಲ್ಲಿ ನಟ್ಟೋಜ ಪೌಂಡೇಶನ್ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಮಾದರಿಯಾಗುವ ಯೋಧರ ಸ್ಮಾರಕವನ್ನು ನಿರ್ಮಿಸಲಾಗಿರುತ್ತದೆ. ಪುತ್ತೂರಿನಲ್ಲಿ ಇನ್ನೊಂದು ಇತಿಹಾಸ ನಿರ್ಮಿಸುವ ಸಲುವಾಗಿ ಕಿಲ್ಲೆ ಮೈದಾನದ ಯೋಧರ ಸ್ಮಾರಕದ ಬಳಿ ೭೫ ಮೀಟರ್ ಎತ್ತರದ ಧ್ವಜಸ್ತಂಭವನ್ನು ನಿರ್ಮಿಸಿದರೆ ಪುತ್ತೂರಿಗೆ ಹೆಮ್ಮೆ ತರುವ ವಿಚಾರವಾಗಿರುತ್ತದೆ.ಪುತ್ತೂರಿನ ಶಾಸಕರಾಗಿ ಪುತ್ತೂರನ್ನು ಸರ್ವ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಪಣತೊಟ್ಟಿರುವ ತಾವು ನಗರಸಭೆ ವತಿಯಿಂದ ಕಿಲ್ಲೆ ಮೈದಾನದಲ್ಲಿ ೭೫ ಮೀಟರ್ ಎತ್ತರದ ಧ್ವಜಸ್ತಂಭವನ್ನು ನಿರ್ಮಿಸುವಂತೆ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್. ಮಹಮ್ಮದಾಲಿಯವರು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮುರಳೀಧರ್ ರೈ ಮಠಂತಬೆಟ್ಟು, ನಗರಸಭಾ ಸದಸ್ಯರಾದ ರಾಬಿನ್ ತಾವ್ರೋ ಮತ್ತಿತರರು ಉಪಸ್ಥಿತರಿದ್ದರು.