ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ನಕ್ಸಲರು ನಾಡಿನ ಮುಖ್ಯವಾಹಿನಿಗೆ ಸೇರುವ ಸಾಧ್ಯತೆ ಸನ್ನಿಹಿತವಾಗಿದೆ.
ಈ ಬಗ್ಗೆ ಖಚಿತ ಮೂಲಗಳು, ನಕ್ಸಲರು ಮುಖ್ಯ ವಾಹಿನಿಗೆ ಸೇರುವ ನಿರ್ಧಾರವನ್ನು ತಿಳಿಸಿದ್ದು ಇಂದು ಬಹುತೇಕ ನಕ್ಸಲರು ಶರಣಗತಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಸುಮಾರು ಎರಡು ದಶಕಗಳ ಕಾಲ ಬಂದೂಕು ಹಿಡಿದು ಹೋರಾಟ ನಡೆಸಿದ್ದ 6 ಮಂದಿ ನಕ್ಸಲರು ಬುಧವಾರ ಶರಣಾಗತಿಗೆ ಸಮ್ಮತಿಸಿದ್ದಾರೆ. ಹಲವು ದಶಕಗಳ ಕಾಲ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದ್ದ ನಕ್ಸಲ್ ಚಳವಳಿ ಬಹುತೇಕ ಅಂತ್ಯ ಕಾಣುವ ಕಾಲ ಸನ್ನಿಹಿತವಾಗಿದೆ.
ಮುಂಡಗಾರು ಲತಾ, ಸುಂದರಿ ಕುಟ್ಟೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ. ವಸಂತ, ಟಿ. ಎನ್. ಜೀಶ್ ಅಲಿಯಾಸ್ ಜಯಣ್ಣ ಬುಧವಾರ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಮುಂದೆ ಶರಣಾಗಲಿದ್ದಾರೆ. ಸರ್ಕಾರ- ನಕ್ಸಲರ ಮಧ್ಯ ಮಧ್ಯಸ್ಥಿಕೆ ವಹಿಸಿರುವ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ಕೆ.ಎಲ್. ಅಶೋಕ್ ಶರಣಾಗತಿ ವಿಷಯ ಖಚಿತಪಡಿಸಿದ್ದಾರೆ. ಬೆಳಗ್ಗೆ 10 ಕ್ಕೆ ಚಿಕ್ಕಮಗಳೂರಿಗೆ ಆರು ನಕ್ಸಲರು ಆಗಮಿಸುವ ಸಾಧ್ಯತೆ ಇದೆ.