ಬೆಳಗಾವಿ: ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಯೋಧ ಮಂಜುನಾಥ ಅಂಬಡಗಟ್ಟಿ ( 35 ) ಮಂಗಳವಾರ ನಿಧನರಾಗಿದ್ದು, ಇಂದು ಅವರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತರಲಾಗಿದೆ.

ಭಾರತೀಯ ಸೇನೆಯ ಇಂಜಿನಿಯರ್ ರೆಜಿಮೆಂಟ್ ನಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಕಳೆದ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ದೆಹಲಿಯ ಮಿಲಿಟರಿ ಬಿ‌.ಎಸ್ ದಾಖಲಾಗಿದ್ದ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದ್ದಾರೆ. ಮೃತರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತರಲಾಗಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.