ಕಟೀಲು : ಕಟೀಲು ಐದನೇ ಮೇಳದ ಆಟದ ಸೇವಾಕರ್ತರಿಂದ ನೆಲದಲ್ಲಿ ಕುಳಿತು ಆಟ ವೀಕ್ಷಿಸಲು ವಿಶೇಷ ವ್ಯವಸ್ಥೆ ಇದಾಗಿದೆ. ಈ ಮೂಲಕ ನೆಲದಲ್ಲಿ ಕುಳಿತು ಆಟ ವೀಕ್ಷಣೆ ಮಾಡುವವರಿಗೆ ಈಗ ಹೊಸ ವ್ಯವಸ್ಥೆಯಾಗಿದೆ.

40-50 ವರ್ಷಗಳ ಹಿಂದೆ ಕಬ್ಬಿಣದ ಮತ್ತು ಪ್ಲಾಸ್ಟಿಕ್ ಕುರ್ಚಿಗಳು ಬಳಕೆಗೆ ಬರುವ ಮೊದಲು ಬಯಲಾಟ ನೋಡಲು ಜನರು ಮನೆಯಿಂದಲೇ ಚಾಪೆ, ಹಾಸು ಬಟ್ಟೆ, ಆಸನ ಕೊಂಡೊಯ್ಯುತ್ತಿದ್ದರು. ಹರಕೆ ಬಯಲಾಟ ಮಾಡಿಸುವವರು ಕುಳಿತುಕೊಳ್ಳಲು ಮಡಲು ಹಾಸುತ್ತಿದ್ದರು, ಅನುಕೂಲ ಇರುವಲ್ಲಿ ಸ್ಥಳೀಯ ಶಾಲೆಯ ಬೆಂಚುಗಳು VIP ಆಸನಗಳಾಗಿ ಇರುತ್ತಿದ್ದವು.

ನೆಲದಲ್ಲಿ ಕುಳಿತು ಆಟ ನೋಡಿದ ಅನುಭವ ಈಗ 45-50 ವರ್ಷ ದಾಟಿದ ಎಲ್ಲಾ ಯಕ್ಷಗಾನ ಅಭಿಮಾನಿಗಳಿಗೆ ಇರಬಹುದು.