ಬೆಳಗಾವಿ : ಬೆಂಗಳೂರಿನ ಭಾಗವತರು ಸಾಂಸ್ಕೃತಿಕ ಸಂಘಟನೆ ಹಾಗೂ ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ “ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಸಂಭ್ರಮ” ಕಾರ್ಯಕ್ರಮವು ನಗರದ ಕನ್ನಡ ಭವನದಲ್ಲಿ ಡಿ. 22 (ರವಿವಾರ) ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ವರೆಗೆ ನಡೆಯಲಿದೆ.

ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು ಬೆಳಿಗ್ಗೆ ಹತ್ತು ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಸಚೇತಕರು, ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ನಿವೃತ್ತ ಅಧೀಕ್ಷಕ ಅಭಿಯಂತರ ರಮೇಶ ಜಂಗಲ್ ಅವರು ವಹಿಸಲಿದ್ದು, ಕೆ.ರೇವಣ್ಣ ಉಪಸ್ಥಿತರಿರುವರು. ಡಾ.ರಾಮಕೃಷ್ಣ ಮರಾಠೆ ಅವರು ಬರೆದ “ರಂಗಭೂಮಿಯ ಸ್ವಾತಂತ್ರ್ಯ ಸಂಗ್ರಾಮ” ಕೃತಿಯನ್ನು ಸಾಹಿತಿ ಡಾ.ಸರಜೂ ಕಾಟ್ಕರ್ ಬಿಡುಗಡೆಗೊಳಿಸುವರು. ಸಾನ್ನಿಧ್ಯವನ್ನು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮಿಜಿ ಅವರು ವಹಿಸುವರು.
ಅಂದು ಮಧ್ಯಾಹ್ನ 12 ಗಂಟೆಗೆ ವಿಚಾರ ಸಂಕಿರಣ ನಡೆಯಲಿದ್ದು “ ಬೆಳಗಾವಿ ಅಧಿವೇಶನ ಮತ್ತು ಗಾಂಧೀಜಿ “ ವಿಷಯವಾಗಿ ಡಾ.ಪಿ.ಜಿ ಕೆಂಪಣ್ಣವರ ಹಾಗೂ “ಕನ್ನಡ ರಂಗಭೂಮಿಯಲ್ಲಿ ಗಾಂಧೀಜಿ” ವಿಷಯವಾಗಿ ಧಾರವಾಡ ರಂಗಕರ್ಮಿ ಡಾ. ಪ್ರಕಾಶ ಗರುಡ ಮಾತನಾಡಲಿರುವರು. ಪ್ರಗತಿವಾಹಿನಿಯ ಎಂ.ಕೆ.ಹೆಗಡೆ ಇವರು ಪ್ರತಿಕ್ರಿಯೆ ನೀಡಲಿರುವರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ವಹಿಸುವರು
ಮದ್ಯಾಹ್ನ 2.30 ಗಂಟೆಗೆ ಸಾಹಿತಿ ಬಿ.ಎಸ್ ಗವಿಮಠ ಅವರ ಅಧ್ಯಕ್ಷತೆಯಲ್ಲಿ ರಂಗಗೌರವ ಮತ್ತು ಸಮಾರೋಪ ಜರುಗಲಿದ್ದು, ಅತಿಥಿಗಳಾಗಿ ವಿಶ್ವಜ್ಯೋತಿ ನಾಟಕ ಮಂಡಳಿಯ ಮಾಲೀಕ ರಾಜಣ್ಣ ಜೇವರಗಿ, ಸಾಹಿತಿ ರವಿ ಕೋಟಾರಗಸ್ತಿ, ಬೆಂಗಳೂರು ರಂಗಕರ್ಮಿ ಮತ್ತು ಪ್ರಕಾಶಕ ಬಿ.ಎಸ್ ವಿದ್ಯಾರಣ್ಯ, ಭಾಗವತರು ಸಂಘಟನೆ ಉಪಾಧ್ಯಕ್ಷ ಹೆಚ್.ಬಿ. ಚಂದ್ರೇಗೌಡ ಉಪಸ್ಥಿತರಿರುವರು.

ಹನುಮೇಶ ಸಕ್ಕರಿ, ಏಣಗಿ ಸುಭಾಶ, ಪ್ರಕಾಶ ಗರುಡ, ಸಂತೋಷಕುಮಾರ ಪಾಟೀಲ, ರವಿವರ್ಮ ದೇಸಾಯಿ, ಸುಶೀಲಾದೇವಿ ಸುಭಾಷ ವಾಲಿ, ವಿಟ್ಠಲರಾವ್ ಯಾಳಗಿ,ರವೀಂದ್ರ ದೇಶಪಾಂಡೆ, ಮಹೇಶ ದೇಶಪಾಂಡೆ ಇವರಿಗೆ ರಂಗಗೌರವ ಸನ್ಮಾನ ನಡೆಯಲಿದೆ.
ಸಂಜೆ 4.30 ರಂಗ ಸೃಷ್ಟಿ ತಂಡ, ಬೆಳಗಾವಿ ಇವರು “ ಪ್ರಿಂಟಿಂಗ್ ಮಶೀನ್” ನಾಟಕವನ್ನು ಪ್ರಸ್ತುತಪಡಿಸಲಿದ್ದು, ಎಸ್.ಎಂ.ಕುಲಕರ್ಣಿ ಹಿರಿಯ ನ್ಯಾಯವಾದಿಗಳು,ಬೆಳಗಾವಿ ಇವರು ನಾಟಕಕ್ಕೆ ಚಾಲನೆ ನೀಡುವರು. ನಾಟಕದ ರಚನೆ ಮತ್ತು ನಿರ್ದೇಶನ ಶಿರೀಷ ಜೋಶಿ ಅವರದಾಗಿದ್ದು, ರಂಗವಿನ್ಯಾಸ ಶರಣಗೌಡ, ಸಂಗೀತ ಮಂಜುಳಾ ಜೋಶಿ ಅವರದ್ದಾಗಿದೆ. ನಾಟಕದಲ್ಲಿ ಶಾಂತಾ ಆಚಾರ್ಯ, ವಾಮನ ಮಳಗಿ, ವಿಠ್ಠಲ ಅಸೋದೆ ,ಶಾರದಾ ಭೋಜ, ಅರವಿಂದ ಪಾಟೀಲ, ವಿಶ್ವನಾಥ ದೇಸಾಯಿ, ಶ್ರದ್ಧಾ ಪಾಟೀಲ, ರಾಜಕುಮಾರ ಕುಂಬಾರ, ರವಿರಾಜ ಭಟ್, ವಿನೋದ ಎಸ್, ಜಯಶ್ರೀ ಕ್ಷೀರಸಾಗರ ಅವರು ಅಭಿನಯಿಸಲಿರುವರು.
ವಿಶೇಷ ಆಹ್ವಾನಿರತಾಗಿ ಪ್ರೊ. ಎಂ.ಎಸ್ ಇಂಚಲ, ಎಲ್.ಎಸ್. ಶಾಸ್ತ್ರಿ, ಸುಭಾಷ ಕುಲಕರ್ಣಿ, ಎಂ.ಕೆ ಜೈನಾಪುರ, ವಿ.ಎಸ್. ಬೆಂಬಳಗಿ, ಡಾ. ಎಚ್.ಬಿ. ರಾಜಶೇಖರ, ಅಶೋಕ ಚಂದರಗಿ, ಪಿ.ಬಿ ಯಲಿಗಾರ, ಡಾ. ಎ.ಬಿ ಘಾಟಗೆ, ಡಾ. ಡಿ.ಎಸ್, ಚೌಗಲೆ, ಡಾ.ಗುರುದೇವಿ ಹುಲೆಪ್ಪನವರಮಠ, ಅರವಿಂದ ಕುಲಕರ್ಣಿ, ಶ್ಯಾಮರಾವ್ ಎನ್.ಕಿತ್ತೂರ, ಯ.ರು. ಪಾಟೀಲ, ಡಾ. ಇಂಗಳಗಿ, ಡಾ. ದಯಾನಂದ ನೂಲಿ, ಎಂ.ಬಿ. ಝಿರಲಿ, ಶಿವಾಜಿರಾವ್ ಕಾಗಣೀಕರ, ಡಾ. ಶ್ರೀಧರ ಹುಕ್ಕೇರಿ, ರಾಮಣ್ಣ ಮುಳ್ಳೂರ, ಬಸವರಾಜ ಬಾವಲತ್ತಿ, ಎಂ.ಡಿ. ಪಾಟೀಲ, ಸ,ರಾ. ಸುಳಕೂಡೆ, ಮುರುಗೇಶ ಶಿವಪೂಜಿಮಠ, ರವಿ ಆಚಾರ್ಯ, ಜಗದೀಶ ಹೊಸಮನಿ, ಬಿ.ಕೆ. ಕುಲಕರ್ಣಿ, ಮಧುಕರ ಗುಂಡೇನಟ್ಟಿ, ಬಿ.ಎನ್. ನಾಡಗೌಡ, ಆರ್.ಬಿ. ದಾಮಣ್ಣನವರ, ಎಂ.ಬಿ ಕುಲಕರ್ಣಿ, ಕೆ.ಎಫ್. ಚವರದ, ಬಿ.ಆರ್. ಸಿಂಗಾಯಿ, ಆರ್.ಎಸ್. ಪಾಟೀಲ, ಪ್ರಕಾಶ ಗಿರಿಮಲ್ಲನವರ, ಡಿ.ಕೆ ನಿಂಬಾಳ, ಜಿ.ಕೆ ಕುಲಕರ್ಣಿ, ಎ.ಎ. ಸನದಿ, ಶ್ವೇತಾ ನರಗುಂದ, ಸರ್ವಮಂಗಳಾ ಅರಳಿಮಟ್ಟಿ, ಸಿ.ಕೆ ಜೋರಪುರ, ಪ್ರೇಮಕ್ಕ ಅಂಗಡಿ, ಸುಮಾ ಕಾಟ್ಕರ್, ರಾಯನಗೌಡ ಪಾಟೀಲ, ಹೇಮಾವತಿ ಸೊನೊಳ್ಳಿ, ಜ್ಯೋತಿ ಬದಾಮಿ, ಡಾ. ವೈ.ಬಿ. ಹಿಮ್ಮಡಿ, ಡಾ. ಕೆ.ಎನ್. ದೊಡಮನಿ, ಡಾ ಎಚ್.ಐ ತಿಮ್ಮಾಪುರ, ಅನಂತ ಪಪ್ಪು, ಇಂದಿರಾ ಮೋಟೆಬೆನ್ನೂರು, ಬಾಳು ಸದಲಗೆ, ಮೋಹನ ಗುಂಡ್ಲೂರ, ಶಿವಪ್ಪ ದಳವಾಯಿ, ಆರ್.ಬಿ. ಕಟ್ಟಿ ನಿರ್ಮಲಾ ಬಟ್ಟಲ ಆಗಮಿಸಲಿದ್ದಾರೆ ಎಂದು ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್, ಬೆಂಗಳೂರು ಭಾಗವತರು ಅಧ್ಯಕ್ಷ ಕೆ.ರೇವಣ್ಣ ಮತ್ತು ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.