ಬೆಂಗಳೂರು: ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿಯಂತೆ ಭಾರೀ ಮಳೆಯಿಂದಾಗಿ ರಸ್ತೆ ಪ್ರಯಾಣ ಕಷ್ಟಕರವಾಗಿದೆ. ಹೆಚ್ಚುವರಿ ರಶ್ ಅನ್ನು ತೆರವುಗೊಳಿಸಲು, ಜುಲೈ 26 ಮತ್ತು 28 ರಂದು ಬೆಂಗಳೂರಿನಿಂದ ಕಾರವಾರಕ್ಕೆ ವಿಶೇಷ ರೈಲುಗಳು ಚಲಿಸುತ್ತವೆ ಎಂದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಬೆಂಗಳೂರಿನಿಂದ 12:30 AM (ಮಧ್ಯರಾತ್ರಿ) ಹೊರಡುವ ಈ ರೈಲುಗಳು ಪಡೀಲ್ ಬೈಪಾಸ್ ಮೂಲಕ ಪ್ರಯಾಣಿಸುತ್ತವೆ ಮತ್ತು ಸುರತ್ಕಲ್, ಕುಂದಾಪುರ ಮತ್ತು ಮುರ್ಡೇಶ್ವರದಲ್ಲಿ ನಿಲುಗಡೆ ಹೊಂದಿದ್ದು, ಸಂಜೆ 4 ಗಂಟೆಗೆ (ಮರುದಿನ) ಕಾರವಾರಕ್ಕೆ ಆಗಮಿಸುತ್ತವೆ. ಹಿಂದಿರುಗುವ ದಿಕ್ಕಿನಲ್ಲಿ ರೈಲು ಕಾರವಾರದಿಂದ ರಾತ್ರಿ 11:55 ಕ್ಕೆ ಹೊರಡಲಿದ್ದು, ಮಧ್ಯಾಹ್ನ 3 ಗಂಟೆಗೆ (ಮರುದಿನ) ಬೆಂಗಳೂರಿಗೆ ಆಗಮಿಸಲಿದೆ.